ADVERTISEMENT

ಕೊರೊನಾ; ತಪಾಸಣಾ ಕೇಂದ್ರ ಆರಂಭ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 14:12 IST
Last Updated 1 ಫೆಬ್ರುವರಿ 2020, 14:12 IST
ವೀರಭದ್ರಯ್ಯ
ವೀರಭದ್ರಯ್ಯ   

ತುಮಕೂರು: ಮಾರಕ ಕೊರೊನಾ ವೈರಸ್‌ಗೆ ಚೀನಾ ಬೆಚ್ಚಿಬಿದ್ದಿದೆ. ಜಗತ್ತಿನ ನಾನಾ ರಾಷ್ಟ್ರಗಳು ಸಹ ಆತಂಕಕ್ಕೆ ತುತ್ತಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಈ ಸಾಂಕ್ರಾಮಿಕ ರೋಗ ತಪಾಸಣೆಗೆ ಕೇಂದ್ರಗಳನ್ನು ತೆರೆಯಲಾಗಿದೆ.

ಶನಿವಾರ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿಯೂ ತಪಾಸಣಾ ಕೇಂದ್ರ ಆರಂಭಿಸಲಾಯಿತು. ರೋಗದ ಲಕ್ಷಣಗಳು ಕಂಡು ಬಂದರೆ ರೋಗಿಯ ರಕ್ತದ ಮಾದರಿ ಸಂಗ್ರಹಿಸಿ ಪೂಣೆಯ ವೈರಾಣು ತಪಾಸಣಾ ಕೇಂದ್ರಕ್ಕೆ ಕಳುಹಿಸಲಾಗುತ್ತದೆ.

‘ಕೇಂದ್ರದಲ್ಲಿ ಪಾಳಿಯಂತೆ ಮೂರು ಮಂದಿ ಕೆಲಸ ನಿರ್ವಹಿಸುವರು. ಮೊದಲ ದಿನ ಯಾವುದೇ ತಪಾಸಣೆ ನಡೆದಿಲ್ಲ. ಇದು ವೈರಸ್ ರೋಗವಾದ ಕಾರಣ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ’ ಎಂದು ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಸೋಂಕು ತಗುಲಿದೆ ರೋಗಿಯನ್ನು ಇತರೆ ರೋಗಿಗಳಿಂದ ಬೇರೆ ಇಟ್ಟು ಚಿಕಿತ್ಸೆ ನೀಡಬೇಕು. ಮಾಸ್ಕ ಧರಿಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.