ADVERTISEMENT

ದಿನಗೂಲಿ ನೌಕರರಿಗೆ ಆಹಾರ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 13:40 IST
Last Updated 9 ಏಪ್ರಿಲ್ 2020, 13:40 IST
ಹಂದಿ ಜೋಗಿ ಕಾಲೊನಿಯಲ್ಲಿ ಆಹಾರ ವಿತರಿಸಿದ ಕನ್ನಡ ಸಂಘಟನೆಗಳ ಪದಾಧಿಕಾರಿಗಳು
ಹಂದಿ ಜೋಗಿ ಕಾಲೊನಿಯಲ್ಲಿ ಆಹಾರ ವಿತರಿಸಿದ ಕನ್ನಡ ಸಂಘಟನೆಗಳ ಪದಾಧಿಕಾರಿಗಳು   

ತುಮಕೂರು: ನಗರದಲ್ಲಿನ ನಿರಾಶ್ರಿತರು, ಅನಾಥಾಶ್ರಮ, ಹಂದಿಜೋಗಿ ಕಾಲೊನಿ, ಕುರಿಪಾಳ್ಯ, ದಿಬ್ಬೂರು ಬಡಾವಣೆಗಳ ನಿವಾಸಿಗಳಿಗೆ ಕನ್ನಡ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಗುರುವಾರ ಆಹಾರ ವಿತರಿಸಿದರು.

ಲಾಕ್‍ಡೌನ್ ಆರಂಭವಾದ ದಿನದಿಂದ ಕೂಲಿ ಕಾರ್ಮಿಕರು, ದಿನಗೂಲಿ ನೌಕರರಿಗೆ ಆಹಾರದ ವ್ಯವಸ್ಥೆ ಮಾಡಲಾಗುತ್ತಿದೆ. ನಿತ್ಯ 1,000 ಮನೆಗಳಿಗೆ ಆಹಾರ ವಿತರಿಸಲಾಗುತ್ತಿದೆ ಎಂದು ಮುಖಂಡರು ತಿಳಿಸಿದರು.

ಈ ಕಾರ್ಯಕ್ಕೆ ವಿವಿಧ ಕನ್ನಡ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಕಾರ್ಯಕರ್ತರು ಸ್ವಯಂಪ್ರೇರಿತಾಗಿ ಬಂದು ಊಟದ ವ್ಯವಸ್ಥೆ ನಿರ್ವಹಿಸುತ್ತಿದ್ದಾರೆ ಎಂದರು.

ADVERTISEMENT

ಮುಖಂಡರಾದ ಎಚ್.ಎನ್.ದೀಪಕ್, ಎಸ್.ಶಂಕರ್, ತನೂಜ್‍ ಕುಮಾರ್, ಎಲ್ಲೇಶ್‍ ಗೌಡ, ರಂಗಸ್ವಾಮಿ, ರಾಜೇಶ್, ಪ್ರವೀಣ್, ಉದಯ್, ಚೇತನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.