ADVERTISEMENT

ಹಾಡಿನ ಮೂಲಕ ಕೋವಿಡ್‌ ಜಾಗೃತಿ ಮೂಡಿಸುತ್ತಿರುವ ಚಿತ್ರದೇವರಹಟ್ಟಿ ಯುವಕ

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 2:13 IST
Last Updated 18 ಜುಲೈ 2020, 2:13 IST
ಸ್ನೇಹಿತನೊಂದಿಗೆ ಕೋವಿಡ್ ಬಗ್ಗೆ ಜಾಗೃತಿ ಗೀತೆ ಹಾಡುತ್ತಿರುವ ಕೀರ್ತಿ ಕುಚೇಲ
ಸ್ನೇಹಿತನೊಂದಿಗೆ ಕೋವಿಡ್ ಬಗ್ಗೆ ಜಾಗೃತಿ ಗೀತೆ ಹಾಡುತ್ತಿರುವ ಕೀರ್ತಿ ಕುಚೇಲ   

ಗುಬ್ಬಿ: ತಾಲ್ಲೂಕಿನ ಹಾಗಲವಾಡಿ ಹೋಬಳಿ ಚಿತ್ರದೇವರಹಟ್ಟಿ ಎಂಬ ಕುಗ್ರಾಮದ ಕೀರ್ತಿಕುಚೇಲ ಎಂಬುವವರು ಸಂತಶಿಶುನಾಳ ಶರೀಫರ ‘ಕೋಡಗಾನ ಕೋಳಿ ನುಂಗಿತ್ತಾ’ ಗೀತೆಯ ದಾಟಿಯಲ್ಲಿ ಹಾಡನ್ನು ರಚಿಸಿ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಆ ಹಾಡು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕೊರೊನಾ ಸೋಂಕಿನಿಂದ ಸಮಾಜದ ವಿವಿಧ ವಲಯಗಳ ಮೇಲೆ ಉಂಟಾಗಿರುವ ಪರಿಣಾಮವನ್ನು ಹಾಡಿನ ಮೂಲಕ ಕಟ್ಟಿಕೊಟ್ಟಿದ್ದು ಸಾವಿರಾರು ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

14 ವರ್ಷದ ಹಿಂದೆ ಸಿನಿಮಾ ರಂಗದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಕನಸು ಕಟ್ಟಿಕೊಂಡು ಹಳ್ಳಿಯನ್ನು ತೊರೆದ ಇವರು, ಸದ್ಯಕ್ಕೆ ಬೆಂಗಳೂರಿನ ಗಾಂಧಿ ನಗರದಲ್ಲಿ, ಸಹ ನಿರ್ದೆಶಕರಾಗಿ ಕೆಲಸ ಮಾಡುತ್ತಿದ್ದಾರೆ.

ADVERTISEMENT

ಇವರ ಈ ಕೆಲಸಕ್ಕೆ ಸ್ನೇಹಿತರಾದ ಕುಚೇಲ, ಸುರೇಶ್, ಶರಣ, ಅಲಮೇಲು, ಕೃಷ್ಣ, ರಾಘವೇಂದ್ರ, ಗಣೇಶ್ ಧ್ವನಿಗೂಡಿಸಿ ಸಹಕರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.