ADVERTISEMENT

ತುಮಕೂರು | 10 ಸಾವಿರ ದಾಟಿತು ತಪಾಸಣೆಗೆ ಒಳಪಟ್ಟವರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 13:42 IST
Last Updated 1 ಜೂನ್ 2020, 13:42 IST
   

ತುಮಕೂರು: ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ತಪಾಸಣೆಗೆ ಒಳಪಟ್ಟವರ ಸಂಖ್ಯೆ 10,088 ದಾಟಿದೆ. ಹೀಗೆ ದಿನದಿಂದ ದಿನಕ್ಕೆ ತಪಾಸಣೆಗೆ ಒಳಪಡುವವರ ಸಂಖ್ಯೆಯೂ ಹೆಚ್ಚುತ್ತಲೇ ಇದೆ.

ತಪಾಸಣೆಗೆ ಒಳಪಟ್ಟವರಲ್ಲಿ 9,286 ಮಾದರಿಗಳು ನೆಗೆಟಿವ್ ಬಂದಿವೆ. ಸೋಮವಾರ (ಜೂ.1) ಒಂದೇ ದಿನ 119 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಸೋಮವಾರವೇ 334 ಮಾದರಿಗಳ ತಪಾಸಣ ವರದಿಗಳನ್ನೂ ಬಿಡುಗಡೆ ಮಾಡಲಾಗಿದ್ದು ಎಲ್ಲವೂ ನೆಗೆಟಿವ್ ಬಂದಿವೆ.

656 ಮಾದರಿಗಳ ಪರೀಕ್ಷಾ ವರದಿಗಳು ಬಾಕಿ ಇವೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದ 7 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ. 22 ಸಕ್ರಿಯ ಪ್ರಕರಣಗಳು ಇವೆ.

ADVERTISEMENT

ಈಗ ಗಂಟಲು ಸ್ರಾವ ಮತ್ತು ಕಫದ ಮಾದರಿಗಳನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳ‍ಪಡಿಸಲು ಪರೀಕ್ಷಾ ಕೇಂದ್ರ ಆರಂಭವಾಗಿದೆ. ಈ ಮುಂಚೆ ಬೆಂಗಳೂರಿಗೆ ಮಾದರಿಗಳನ್ನು ಕಳುಹಿಸಬೇಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.