ADVERTISEMENT

ತುಮಕೂರು: 883 ಸಕ್ರಿಯ ಕೊರೊನಾ ಪ್ರಕರಣ

ಎರಡು ಸಾವಿರ ಸಮೀಪಿಸುತ್ತಿರುವ ಸೋಂಕಿತರು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 13:36 IST
Last Updated 3 ಆಗಸ್ಟ್ 2020, 13:36 IST
ಚಿಕ್ಕನಾಯಕನಹಳ್ಳಿವಿದ್ಯಾನಗರದ 1ನೇ ಕ್ರಾಸ್‌ನಲ್ಲಿ ವ್ಯಕ್ತಿ ಒಬ್ಬರಲ್ಲಿ ಕೊರೊನಾ ದೃಢವಾಗದ್ದು ಆ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ
ಚಿಕ್ಕನಾಯಕನಹಳ್ಳಿವಿದ್ಯಾನಗರದ 1ನೇ ಕ್ರಾಸ್‌ನಲ್ಲಿ ವ್ಯಕ್ತಿ ಒಬ್ಬರಲ್ಲಿ ಕೊರೊನಾ ದೃಢವಾಗದ್ದು ಆ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ   

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಇಲ್ಲಿಯವರೆಗೂ 1,047 ರೋಗಿಗಳು ಗುಣಮುಖರಾಗಿದ್ದಾರೆ. ಈ ಮೂಲಕ ಸೋಂಕಿಗೆ ತುತ್ತಾದ ಅರ್ಧಕ್ಕಿಂತಲೂ ಹೆಚ್ಚು ಜನರಿಗೆ ಕಾಯಿಲೆ ವಾಸಿಯಾಗಿದೆ. ಜಿಲ್ಲೆಯಲ್ಲಿ ಸದ್ಯ 883 ಸಕ್ರಿಯ ಪ್ರಕರಣಗಳು ಇವೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 76 ಮಂದಿ ಗುಣಮುಖರಾಗಿ ಸೋಮವಾರ ಬಿಡುಗಡೆಯಾದರು.

ಸೋಮವಾರ ಮತ್ತೆ 72 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1988 ತಲುಪಿದೆ. ಅಲ್ಲದೆ ತುಮಕೂರಿನ ಕ್ಯಾತ್ಸಂದ್ರದ 76 ವರ್ಷದ ಮಹಿಳೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ 58 ತಲುಪಿದೆ. ಸೋಮವಾರ 41 ಪುರುಷರಿಗೆ 31 ಮಹಿಳೆಯರಿಗೆ ಸೋಂಕು ದೃಢವಾಗಿದೆ. ಇವರಲ್ಲಿ ಇಬ್ಬರು ಐದು ವರ್ಷದ ಒಳಗಿನ ಮಕ್ಕಳೂ ಇದ್ದಾರೆ.

ತಾಲ್ಲೂಕು;ಇಂದಿನ ಸೋಂಕಿತರು (ಆ.3);ಒಟ್ಟು ಸೋಂಕಿತರು;ಮರಣ

ADVERTISEMENT

ಚಿ.ನಾ.ಹಳ್ಳಿ;4;116;3

ಗುಬ್ಬಿ;4;98;3

ಕೊರಟಗೆರೆ;7;98;2

ಕುಣಿಗಲ್;12;195;3

ಮಧುಗಿರಿ;5;141;2

ಪಾವಗಡ;2;157;1

ಶಿರಾ;2;127;3

ತಿಪಟೂರು;3;129;1

ತುಮಕೂರು;28;829;40

ತುರುವೇಕೆರೆ;5;98;0

ಒಟ್ಟು;72;1988;58

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.