ADVERTISEMENT

ನಾಲ್ಕು ಕರುವಿಗೆ ಜನ್ಮ ನೀಡಿದ ಹಸು

​ಪ್ರಜಾವಾಣಿ ವಾರ್ತೆ
Published 4 ಜುಲೈ 2023, 10:08 IST
Last Updated 4 ಜುಲೈ 2023, 10:08 IST
ನಾಲ್ಕು ಕರುವಿಗೆ ಜನ್ಮ ನೀಡಿದ ಹಸು
ನಾಲ್ಕು ಕರುವಿಗೆ ಜನ್ಮ ನೀಡಿದ ಹಸು   

ಚೇಳೂರು: ಹೋಬಳಿಯ ಚೇಳೂರುಹಟ್ಟಿ ಗ್ರಾಮದ ಕರಿಯಪ್ಪ ಎಂಬುವರಿಗೆ ಸೇರಿದ ಸೀಮೆಹಸು ಭಾನುವಾರ ರಾತ್ರಿ ತನ್ನ ಆರನೇ ಹೆರಿಗೆಯಲ್ಲಿ ನಾಲ್ಕು ಕರುಗಳಿಗೆ ಜನ್ಮ ನೀಡಿದೆ.

ಒಟ್ಟು ನಾಲ್ಕು ಕರುಗಳಲ್ಲಿ ಒಂದು ಹೆಣ್ಣು, ಮೂರು ಗಂಡುಕರು ಜನಿಸಿದ್ದು, ಅದರಲ್ಲಿ ಒಂದು ಗಂಡು ಕರು ಸಾವುನ್ನುಪ್ಪಿದೆ. ಹಿಂದಿನ ವರ್ಷ ಪಶು ವೈದ್ಯಾಧಿಕಾರಿ ಶಂಕರಪ್ಪ ಅವರು ಈ ಸೀಮೆ ಹಸುವಿಗೆ ಕೃತಕ ಗರ್ಭಧಾರಣೆ ಮಾಡಿದ್ದರು. ಇಂತಹ ಘಟನೆಗಳು ಅಪರೂಪಕ್ಕೆ ಜರುಗುತ್ತವೆ ಎಂದು ವೈದ್ಯಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT