
ಪ್ರಜಾವಾಣಿ ವಾರ್ತೆಹಲ್ಲೆ
– ಗೆಟ್ಟಿ ಚಿತ್ರ
ಪ್ರಜಾವಾಣಿ ವಾರ್ತೆ
ಗುಬ್ಬಿ(ತುಮಕೂರು): ತಾಲ್ಲೂಕಿನ ಎಂ.ಎಚ್ ಪಟ್ಟಣ ಗೇಟ್‌ನಲ್ಲಿರುವ ಜಿಎನ್‌ಬಿ ಸ್ಪಿರಿಟ್ ಆ್ಯಂಡ್ ಸ್ಟೇ ಹೋಟೆಲ್‌ಗೆ ಊಟಕ್ಕೆ ಹೋಗಿದ್ದ ಪರಿಶಿಷ್ಟ ಜಾತಿಯ ಯುವಕನ ಮೇಲೆ ಹೋಟೆಲ್ ಮಾಲೀಕ ಹಾಗೂ ಸಹಚರ ಮಂಗಳವಾರ ರಾತ್ರಿ ಹಲ್ಲೆ ನಡೆಸಿದ್ದಾರೆ.
ಗುಬ್ಬಿ ಪಟ್ಟಣದ ಯಶವಂತ (25) ಹಲ್ಲೆಗೊಳಗಾದ ಯುವಕ. ಹಲ್ಲೆಯಿಂದಾಗಿ ಯುವಕನ ಕೈಮೂಳೆಗೆ ಪೆಟ್ಟು ಬಿದ್ದಿದ್ದು, ಗುಬ್ಬಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರು ಯುವಕನಿಂದ ಹೇಳಿಕೆ ಪಡೆದು ದಲಿತ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕಿ ವೀಣಾ ಭೇಟಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.