ADVERTISEMENT

ದಸರಾ ಕ್ರೀಡಾಕೂಟ: ತುಮಕೂರು, ಚಿಕ್ಕಬಳ್ಳಾಪುರ ತಂಡ ರಾಜ್ಯ ಮಟ್ಟಕ್ಕೆ

ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2024, 5:24 IST
Last Updated 30 ಸೆಪ್ಟೆಂಬರ್ 2024, 5:24 IST
ತುಮಕೂರಿನಲ್ಲಿ ಭಾನುವಾರ ನಡೆದ ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಕಬಡ್ಡಿ ಪಂದ್ಯಾವಳಿಯಲ್ಲಿ ಜಯ ಗಳಿಸಿದ ತುಮಕೂರು ತಂಡ
ತುಮಕೂರಿನಲ್ಲಿ ಭಾನುವಾರ ನಡೆದ ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಕಬಡ್ಡಿ ಪಂದ್ಯಾವಳಿಯಲ್ಲಿ ಜಯ ಗಳಿಸಿದ ತುಮಕೂರು ತಂಡ   

ತುಮಕೂರು: ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಕಬಡ್ಡಿ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ತುಮಕೂರು ತಂಡವು ಕೋಲಾರ ತಂಡದ ವಿರುದ್ಧ 28–21 ಅಂಕ ಗಳಿಸಿ ಜಯ ಸಾಧಿಸಿತು. ಮಹಿಳೆಯರ ವಿಭಾಗದಲ್ಲಿ ಚಿಕ್ಕಬಳ್ಳಾಪುರ ತಂಡ 15–06 ಅಂಕಗಳೊಂದಿಗೆ ತುಮಕೂರು ತಂಡಕ್ಕೆ ಸೋಲುಣಿಸಿತು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ವಿವಿಧ ಸ್ಪರ್ಧೆಗಳು ನಡೆದವು. ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರು.

ಪುರುಷರ ವಿಭಾಗ: 100 ಮೀಟರ್‌ ಓಟ– ಎಂ.ಗೌತಮ್‌ (ಶಿವಮೊಗ್ಗ), ಎಂ.ವಿ.ಅಭಿ (ಶಿವಮೊಗ್ಗ), ಅಭಿಷೇಕ್‌ (ರಾಮನಗರ). 200 ಮೀಟರ್‌– ಶಶಾಂಕ್‌ ವರ್ಮಾ (ತುಮಕೂರು), ಎಂ.ನಿತಿನ್‌ಗೌಡ (ಬೆಂಗಳೂರು ಗ್ರಾಮಾಂತರ), ಎಂ.ಡಿ.ದರ್ಶನ್‌ (ಶಿವಮೊಗ್ಗ). 400 ಮೀಟರ್‌– ಎಂ.ನಿತಿನ್‌ಗೌಡ (ಬೆಂಗಳೂರು ಗ್ರಾಮಾಂತರ), ಎಸ್‌.ಆಕಾಶ್‌ (ಶಿವಮೊಗ್ಗ), ಪಿ.ಪ್ರಜ್ವಲ್‌ (ಬೆಂಗಳೂರು ಗ್ರಾಮಾಂತರ). 800 ಮೀಟರ್‌– ಎಂ.ಎಸ್‌.ಆಶ್ರಿತ್‌ (ಶಿವಮೊಗ್ಗ), ಆನಂದ್‌ (ಬೆಂಗಳೂರು ಗ್ರಾಮಾಂತರ), ದ್ವೀಪ್‌ ಮೇದಪ್ಪ (ಬೆಂಗಳೂರು ಗ್ರಾಮಾಂತರ). 1,500 ಮೀಟರ್– ಎಂ.ಎಸ್‌.ಆಶ್ರಿತ್‌ (ಶಿವಮೊಗ್ಗ), ಈ.ಸುದೀಪ್‌ (ರಾಮನಗರ), ಬಿ.ಎಸ್‌.ಧನುಷ್‌ (ಬೆಂಗಳೂರು ಗ್ರಾಮಾಂತರ). 5 ಸಾವಿರ ಮೀಟರ್‌– ಈ.ಸುದೀಪ್‌ (ರಾಮನಗರ), ಗೋವಿಂದರಾಜು ಈ.ಹಲಗಿ (ದಾವಣಗೆರೆ), ದರ್ಶನ್‌ (ತುಮಕೂರು). 10 ಸಾವಿರ ಮೀಟರ್‌– ಎಚ್‌.ಎ.ದರ್ಶನ್‌ (ತುಮಕೂರು), ನೀಲಪ್ಪ ಬೆಳ್ಳಾರಿ (ದಾವಣಗೆರೆ), ವಿ.ನಂದನ್‌ (ಬೆಂಗಳೂರು ಗ್ರಾಮಾಂತರ).

ADVERTISEMENT

ಉದ್ದ ಜಿಗಿತ– ಟಿ.ಲೋಹಿಯಾ (ಚಿತ್ರದುರ್ಗ), ಮಹ್ಮದ್‌ ಮಿಜಾಮಿರ್‌ (ಶಿವಮೊಗ್ಗ), ಎಚ್‌.ಎಸ್‌.ಗಗನ್‌ (ದಾವಣಗೆರೆ). ಎತ್ತರ ಜಿಗಿತ– ಶಶಿಕುಮಾರ್‌ (ತುಮಕೂರು), ಕೆ.ದರ್ಶನ್‌ (ಚಿತ್ರದುರ್ಗ), ಪುನೀತ್‌ (ಚಿಕ್ಕಬಳ್ಳಾಪುರ). ಗುಂಡು ಎಸೆತ– ಕೆ.ಆರ್‌.ಲಿಖಿತ್‌ (ರಾಮನಗರ), ಜಿ.ಚೇತನ್‌ಕುಮಾರ್‌ (ಶಿವಮೊಗ್ಗ). ತ್ರಿವಿಧ ಜಿಗಿತ– ಶಿವಿಲ್‌ (ಕೋಲಾರ), ಮಹ್ಮದ್‌ ಮಿಜಾಮಿರ್‌ (ಶಿವಮೊಗ್ಗ), ಕೆ.ದರ್ಶನ್‌ (ಚಿತ್ರದುರ್ಗ). ಜಾವೆಲಿನ್‌ ಥ್ರೋ– ಕೆ.ಜೆ.ರಂಗನಾಥ್‌ (ತುಮಕೂರು), ಸುಬ್ರಮಣ್ಯ (ಶಿವಮೊಗ್ಗ), ಚಿಂತನ್‌ಕುಮಾರ್‌ (ರಾಮನಗರ). ಡಿಸ್ಕಸ್‌ ಥ್ರೋ– ನಿತಿನ್ ರೆಡ್ಡಿ (ರಾಮನಗರ), ಜಿ.ಮಂಜುನಾಥ್‌ (ಕೋಲಾರ), ಎಸ್‌.ಸಿ.ಗಿರೀಶ್‌ (ಶಿವಮೊಗ್ಗ).

ಮಹಿಳೆಯರ ವಿಭಾಗ: 100 ಮೀಟರ್‌ ಓಟ– ಎಸ್‌.ಆರ್‌.ಚೈತನ್ಯ (ಚಿಕ್ಕಬಳ್ಳಾಪುರ), ಎಸ್‌.ಖುಷಿ (ಶಿವಮೊಗ್ಗ), ಆರ್‌.ವಿ.ಭೂಮಿಕಾ (ತುಮಕೂರು). 200 ಮೀಟರ್‌– ವಿ.ದಿವ್ಯಾ (ಬೆಂಗಳೂರು ಗ್ರಾಮಾಂತರ), ಎಸ್‌.ಆರ್‌.ಶಿವಾನಿ(ತುಮಕೂರು), ಎಸ್‌.ಆರ್‌.ಚೈತನ್ಯ (ಚಿಕ್ಕಬಳ್ಳಾಪುರ). 400 ಮೀಟರ್‌– ರಷ್ಮಿಕಾಗೌಡ (ರಾಮನಗರ), ವಿ.ದಿವ್ಯಾ (ಬೆಂಗಳೂರು ಗ್ರಾಮಾಂತರ), ಆರ್‌.ವಿ.ಭೂಮಿಕಾ (ತುಮಕೂರು). 800 ಮೀಟರ್‌– ರಷ್ಮಿಕಾಗೌಡ (ರಾಮನಗರ), ಎಚ್‌.ಸಿ.ಲಕ್ಷ್ಮಿ (ಶಿವಮೊಗ್ಗ), ಎಸ್‌.ದಿವ್ಯಾ (ರಾಮನಗರ). 1,500 ಮೀಟರ್– ಪ್ರಣತಿ (ಬೆಂಗಳೂರು ಗ್ರಾಮಾಂತರ), ಎಚ್‌.ವಿ.ದೀಕ್ಷಾ (ಶಿವಮೊಗ್ಗ), ಎಂ.ಸಾಹಿತ್ಯ (ಕೋಲಾರ). 3 ಸಾವಿರ ಮೀಟರ್‌– ಪ್ರಣತಿ (ಬೆಂಗಳೂರು ಗ್ರಾಮಾಂತರ), ಎಚ್‌.ವಿ.ದೀಕ್ಷಾ (ಶಿವಮೊಗ್ಗ), ಎಸ್‌.ಎಂ.ಸಾನಿಕಾ (ಶಿವಮೊಗ್ಗ).

ಉದ್ದ ಜಿಗಿತ– ಆರ್‌.ವಿ.ಪ್ರಾಪ್ತಿ (ತುಮಕೂರು), ಅಮೂಲ್ಯ (ಶಿವಮೊಗ್ಗ), ವಿ.ಮಾನಸ (ಕೋಲಾರ). ಎತ್ತರ ಜಿಗಿತ–ವಿ.ಮಾನಸ (ಕೋಲಾರ), ಸಿ.ಚಿತ್ರರತಿ (ಚಿತ್ರದುರ್ಗ), ಎಂ.ಆರ್‌.ಅನ್ವಿತಾ (ಶಿವಮೊಗ್ಗ). ಗುಂಡು ಎಸೆತ– ಎಚ್‌.ಟಿ.ಅಮೃತಾ (ಚಿಕ್ಕಬಳ್ಳಾಪುರ), ಡಿ.ಪವಿತ್ರಾ (ಚಿತ್ರದುರ್ಗ), ಎಂ.ಎ.ಶೃತಿ (ರಾಮನಗರ). ತ್ರಿವಿಧ ಜಿಗಿತ– ಅಮೂಲ್ಯ(ಶಿವಮೊಗ್ಗ), ಕೆ.ಸುಷ್ಮಾ (ತುಮಕೂರು), ಎಂ.ಧನಲಕ್ಷ್ಮಿ (ಶಿವಮೊಗ್ಗ). ಜಾವೆಲಿನ್‌ ಥ್ರೋ– ಎಂ.ಸೌಜನ್ಯ (ರಾಮನಗರ), ಕೆ.ಸುಷ್ಮಾ (ತುಮಕೂರು), ಎಂ.ಧನಲಕ್ಷ್ಮಿ(ಶಿವಮೊಗ್ಗ . ಡಿಸ್ಕಸ್‌ ಥ್ರೋ– ಎಂ.ಸೌಜನ್ಯ (ರಾಮನಗರ), ಬಿಂದು (ಶಿವಮೊಗ್ಗ), ರುಕ್ಷಕ್‌ ಶರೀಫ್‌ (ಬೆಂಗಳೂರು ಗ್ರಾಮಾಂತರ).

ಕಬಡ್ಡಿ ಫೈನಲ್‌ ಪಂದ್ಯ ಜಯಿಸಿದ ಚಿಕ್ಕಬಳ್ಳಾಪುರ ಮಹಿಳೆಯರ ತಂಡ
ತುಮಕೂರಿನಲ್ಲಿ ಭಾನುವಾರ ನಡೆದ ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಯುವತಿಯರು
ಜಿಗಿತ ಒಂದು ಭಂಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.