
ಪ್ರಜಾವಾಣಿ ವಾರ್ತೆ
ಹುಳಿಯಾರು: ಹೋಬಳಿಯ ದಸೂಡಿ ಆಂಜನೇಯ ಜಾತ್ರೆ ಅಂಗವಾಗಿ ಶನಿವಾರ ರಥೋತ್ಸವ ನೆರವೇರಿತು.
ರಾಮನವಮಿಗೂ ಮೊದಲೇ ಜಾತ್ರೆ ಆರಂಭವಾಗಿದ್ದು ಹಬ್ಬದ ದಿನದಂದು ರಾಮೋತ್ಸವ ನಡೆಯಿತು. ನಂತರ ಪ್ರತಿದಿನ ಧಾರ್ಮಿಕ ಕಾರ್ಯಗಳು ನಡೆದವು.
ರಥೋತ್ಸವದ ಅಂಗವಾಗಿ ದೇಗುಲದಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜಾ ವಿಧಿ-ವಿಧಾನಗಳು ನಡೆದವು. ಗೌಡಗೆರೆ ದುರ್ಗಮ್ಮ ದೇವತೆಯ ವಿಶೇಷ ಕುಣಿತದೊಂದಿಗೆ ರಥವನ್ನು ಸಾವಿರಾರು ಭಕ್ತರು ಎಳೆದರು.
ಬಿಸಿಲ ಝಳ ಕಡಿಮೆಯಿದ್ದು, ಮೋಡ ಮುಸುಕಿದ ವಾತಾವರಣ ಇದ್ದುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ಕೆಲವರು ಕಳಸಕ್ಕೆ ಬಾಳೆಹಣ್ಣು ಎಸೆದು ಹರಕೆ ತೀರಿಸಿದರು.
ಗೊಲ್ಲರಹಟ್ಟಿಗಳ ಮಕ್ಕಳು ಹಾಗೂ ಯುವಕರ ಕೋಲಾಟ ಗಮನ ಸೆಳೆಯಿತು. ಸಂಪ್ರದಾಯದಂತೆ ರಥೋತ್ಸವದ ಧ್ವಜ ಹಾಗೂ ಹೂವಿನ ಹಾರಗಳನ್ನು ಭಕ್ತರ ಸಮ್ಮುಖದಲ್ಲಿ ಹರಾಜು ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.