ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಕಂದಿಕೆರೆ ಹೋಬಳಿ ಕಾತ್ರಿಕೆಹಾಳ್‌ನಲ್ಲಿ ಡಿಸಿಸಿ ಬ್ಯಾಂಕ್ 34ನೇ ಶಾಖೆಗೆ ಸಚಿವ ಜೆ.ಸಿ.ಮಾಧುಸ್ವಾಮಿ ಚಾಲನೆ ನೀಡಿದರು.
ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್‌ಕುಮಾರ್ ಮಾತನಾಡಿ, ಕಾತ್ರಿಕೆಹಾಳ್ ಸೇರಿದಂತೆ ಗುಡ್ಡಗಾಡು ಭಾಗದಲ್ಲಿ 3500ಕ್ಕೂ ಹೆಚ್ಚು ರೈತರ ಖಾತೆಗಳು ಪಟ್ಟಣದ ಬ್ಯಾಂಕ್‌ಗಳಲ್ಲಿವೆ. ತೀರ್ಥಪುರ, ಸಿಂಗದಹಳ್ಳಿ, ಸಿದ್ದನಕಟ್ಟೆ, ಜಾಣೆಹಾರ್ ಸುತ್ತಮುತ್ತಲಿನ ಹಳ್ಳಿಗಳಿಗೆ ಕಾತ್ರಿಕೆಹಾಲ್ ಕೇಂದ್ರ. ಹಾಗಾಗಿ ಇಲ್ಲಿ ಡಿಸಿಸಿ ಬ್ಯಾಂಕ್ ಶಾಖೆ ತೆರೆಯಲಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಕುಬೇಂದ್ರನಾಯ್ಕ್, ರೈತರನ್ನು ಖಾಸಗಿ ಬಡ್ಡಿ ವ್ಯಾಪಾರಿಗಳ ಹಿಡಿತದಿಂದ ತಪ್ಪಿಸಿ ನೆಮ್ಮದಿಯ ಜೀವನ ನಡೆಸುವಂತೆ ಮಾಡಲು ಬ್ಯಾಂಕ್ ತೆರೆಯಲಾಗಿದೆ ಎಂದರು.
ತೀರ್ಥಪುರ ಗ್ರಾ.ಪಂ ಅಧ್ಯಕ್ಷ ನಾಗರಾಜು, ರಾಮನಹಳ್ಳಿಯ ನರಸಿಂಹಮೂರ್ತಿ, ಕುಮಾರಸ್ವಾಮಿ, ರಾಮ ಕೃಷ್ಣ, ಎಸ್.ಆರ್.ರಂಗ ಸ್ವಾಮಿ, ಸಿಡಿಒ ಮಾಂತೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.