ತುಮಕೂರು: ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರನ್ನು ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಕಾಲೇಜಿನ (ಕಿಮ್ಸ್) ನಿರ್ದೇಶಕರಾಗಿ ನೇಮಿಸುವಂತೆ ಒಕ್ಕಲಿಗರ ಕೇಂದ್ರ ಸಂಘದ ನಿರ್ದೇಶಕ ಆರ್.ಹನುಮಂತರಾಯಪ್ಪ ಒತ್ತಾಯಿಸಿದ್ದಾರೆ.
ಜಯದೇವ ಸಂಸ್ಥೆ ಪ್ರಸ್ತುತ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದೆ. ಇದರ ಹಿಂದೆ ಮಂಜುನಾಥ್ ಅವರ ಕೊಡುಗೆ ಸಾಕಷ್ಟು ಇದೆ. ಮಂಜುನಾಥ್ ಸೇವೆ ರಾಜ್ಯದ, ದೇಶದ ಜನರಿಗೆ ಅಗತ್ಯವಿದೆ. ಕೇಂದ್ರ ಒಕ್ಕಲಿಗರ ಸಂಘ ಅವರನ್ನು ಕಿಮ್ಸ್ ನಿರ್ದೇಶಕರಾಗಿ ನೇಮಕ ಮಾಡಿದರೆ ಸಂಸ್ಥೆಯ ಬೆಳವಣಿಗೆಯ ಜತೆಗೆ, ಬಡ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಲಿದೆ ಎಂದು ತಿಳಿಸಿದ್ದಾರೆ.
ಒಂದು ಕಾಲದಲ್ಲಿ ಜನರು ಜಯದೇವ ಆಸ್ಪತ್ರೆಯ ಒಳಗೆ ಕಾಲಿಡಲು ಹಿಂಜರಿಯುತ್ತಿದ್ದರು. ಅದೇ ಆಸ್ಪತ್ರೆಯನ್ನು ಪ್ರಸ್ತುತ ರಾಷ್ಟ್ರ ಮಟ್ಟದಲ್ಲಿ ಗುರುತಿಸುತ್ತಾರೆ. ಇದಕ್ಕೆ ಮಂಜುನಾಥ್ ಅವರ ನಗುಮುಖದ ಸೇವೆಯೇ ಕಾರಣ. ಜಯದೇವ ಆಸ್ಪತ್ರೆಯನ್ನು ಹಂತ ಹಂತವಾಗಿ ಮೇಲ್ದರ್ಜೆಗೇರಿಸಿ, ಇಡೀ ದೇಶದಲ್ಲಿಯೇ ಗುಣಮಟ್ಟದ ಆರೋಗ್ಯ ಸೇವೆ ದೊರೆಯುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ನಮ್ಮ ಒಕ್ಕಲಿಗರ ಸಂಘಕ್ಕೂ ಅವರ ಸೇವೆ ಲಭಿಸಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.