ADVERTISEMENT

ತುಮಕೂರು: ಮನೆಗೆಲಸದ ಮಹಿಳೆಯರಿಗೆ ಸಹಾಯಧನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 16:20 IST
Last Updated 26 ಜೂನ್ 2020, 16:20 IST
ಮನೆಗೆಲಸದ ಮಹಿಳೆಯರಿಗೆ ಸಹಾಯಧನ ನೀಡುವಂತೆ ಆಗ್ರಹಿಸಿ ಎಐಎಂಎಸ್‌ಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಮನೆಗೆಲಸದ ಮಹಿಳೆಯರಿಗೆ ಸಹಾಯಧನ ನೀಡುವಂತೆ ಆಗ್ರಹಿಸಿ ಎಐಎಂಎಸ್‌ಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ತುಮಕೂರು: ಮನೆಗೆಲಸದ ಮಹಿಳೆಯರಿಗೆ ಸಹಾಯಧನ ನೀಡುವಂತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಕಾರ್ಮಿಕ ಇಲಾಖೆ ಕಚೇರಿ ಮುಂಭಾಗ ಶುಕ್ರವಾರ ಎಐಎಂಎಸ್‍ಎಸ್ ಸಂಘಟನೆಯು ಪ್ರತಿಭಟನೆ ನಡೆಸಿತು.

ಎಐಎಂಎಸ್‍ಎಸ್ ಜಿಲ್ಲಾ ಘಟಕದ ಅಧ್ಯಕ್ಷೆ ಎಂ.ವಿ.ಕಲ್ಯಾಣಿ ಮಾತನಾಡಿ, ‘ಲಾಕ್‌ಡೌನ್ ಪರಿಣಾಮ ಅಸಂಘಟಿತ ಕಾರ್ಮಿಕರು ಜೀವನೋಪಾಯ ಕಳೆದುಕೊಂಡಿದ್ದಾರೆ. ಮನೆಗೆಲಸ ಮಾಡಿ ಜೀವನ ನಿರ್ವಹಿಸುವ ಮಹಿಳೆಯರು ಕೂಡ ಈ ಗುಂಪಿಗೆ ಸೇರುತ್ತಾರೆ. ಕಳೆದ ಎರಡು ಮೂರು ತಿಂಗಳು ಅವರಿಗೆ ಕೆಲಸಕ್ಕೆ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಅವರ ಜೀವನವು ಮತ್ತಷ್ಟು ಕೆಳ ಹಂತ ತಲುಪಿದೆ’ ಎಂದರು.

ಸರ್ಕಾರವು ಇವರಿಗೆ ಆಹಾರ ಧಾನ್ಯಗಳ ಕಿಟ್‍ಗಳನ್ನು ವಿತರಿಸಬೇಕು. ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿಗೆ ಹಣ ಒದಗಿಸಿ ಮನೆಗೆಲಸದ ಮಹಿಳೆಯರಿಗೂ ಸಹಾಯಧನ ನೀಡಬೇಕು. ಅವರು ಮನೆ ಕೆಲಸಕ್ಕಾಗಿ ಬೇರೆ ಬೇರೆ ಪ್ರದೇಶ, ಬಡಾವಣೆಗಳಿಗೆ ಹೋಗುವುದರಿಂದ ಅವರಿಗೆ ಬಸ್‍ಪಾಸ್ ಅನ್ನು ರಿಯಾಯಿತಿ ದರದಲ್ಲಿ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ವಿವಿಧ ಬೇಡಿಕೆಗಳ ಈಡೇರಿಕೆಗೆ ಕೋರಿ ಕಾರ್ಮಿಕ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರತ್ನಮ್ಮ, ಚಿನ್ನಮ್ಮ, ಅಮೃತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.