ADVERTISEMENT

ಮೋಹನದಾಸ ಮಹಾತ್ಮನಾದ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 15:50 IST
Last Updated 12 ಜುಲೈ 2019, 15:50 IST
‘ಮೋಹನದಾಸ ಮಹಾತ್ಮನಾದ’ ನಾಟಕ ಪ್ರದರ್ಶನದ ನೋಟ
‘ಮೋಹನದಾಸ ಮಹಾತ್ಮನಾದ’ ನಾಟಕ ಪ್ರದರ್ಶನದ ನೋಟ   

ತುಮಕೂರು: ಮೇಳೇಹಳ್ಳಿಯ ಡಮರುಗ ರಂಗ ಸಂಪನ್ಮುಲ ಕೇಂದ್ರ ಆಯೋಜಿಸಿದ ಮೂರು ದಿನಗಳ ನಾಟಕೋತ್ಸವದಲ್ಲಿ 3ನೇ ದಿನದ ನಾಟಕ ‘ಮೋಹನದಾಸ ಮಹಾತ್ಮನಾದ’ ಎಂಬ ನಾಟಕವನ್ನು ಡಮರುಗ ರಂಗ ತಂಡದ ಕಲಾವಿದರು ಅಭಿನಯಿಸಿದರು.

ಭಾರತವೇ ಅವಿಭಾಜ್ಯ ಅಂಗ ಗಾಂಧಿ ಎಂಬ ಆಶಯ ಹೊಂದಿದ ನಾಟಕ ಗಾಂಧಿಯ 150ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಪ್ರಯೋಗಗೊಂಡಿದ್ದು, ಬಹಳ ಅರ್ಥಪೂರ್ಣವಾಗಿದೆ ಎಂದು ಹೇಳಿದರು.

ಹಾರ್ಮೋನಿಯಂ ಕಲಾವಿದ ಅಡವೀಶಯ್ಯ, ನಾಟಕಮನೆ ಮಹಾಲಿಂಗು ಉಪಸ್ಥಿತರಿದ್ದರು. ಸ್ನೇಹ, ಪ್ರಕಾಶ್, ಭರತ್, ಗವಿರಾಜ್, ಸಂತೋಷ್, ಮಹಾಂತೇಶ್ ಅವರು ಮನೋಜ್ಞವಾಗಿ ಅಭಿನಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.