ADVERTISEMENT

ಯಗಚೀಹಳ್ಳಿ: ಶಾಲಾ ವನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 5:01 IST
Last Updated 5 ಅಕ್ಟೋಬರ್ 2021, 5:01 IST
ಹುಳಿಯಾರು ಹೋಬಳಿಯ ಯಗಚೀಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವನವನ್ನು ಡಾ.ಹರೀಶ್‌ಕುಮಾರ್ ಉದ್ಘಾಟಿಸಿದರು
ಹುಳಿಯಾರು ಹೋಬಳಿಯ ಯಗಚೀಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವನವನ್ನು ಡಾ.ಹರೀಶ್‌ಕುಮಾರ್ ಉದ್ಘಾಟಿಸಿದರು   

ಹುಳಿಯಾರು: ‘ಪರಿಸರ ನಮ್ಮ ಆಸೆ ಪೂರೈಸಬಲ್ಲದು. ಆದರೆ ದುರಾಸೆಗಳನ್ನಲ್ಲ’ ಎಂದು ಹಾಸನ ಜಿಲ್ಲೆಯ ಬಾನುಗೋಂದಿ ಗ್ರಾಮದ ಸೀಕೋ ಸಂಸ್ಥೆಯ ಮುಖ್ಯಸ್ಥ ಡಾ.ಹರೀಶ್‌ಕುಮಾರ್ ತಿಳಿಸಿದರು.

ಹೋಬಳಿಯ ಯಗಚೀಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಶಾಲಾ ವನ ಉದ್ಘಾಟಿಸಿ ಅವರು
ಮಾತನಾಡಿದರು.

ಗಾಂಧೀಜಿ ಅವರ ಹೇಳಿಕೆಗೆ ಪೂರಕವಾಗಿ ಬದುಕನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ವೈವಿಧ್ಯಮಯ ಶಾಲಾವನ ನಿರ್ಮಿಸಲು ಉತ್ತೇಜನ ನೀಡಲಾಗುತ್ತದೆ. ಚಿಕ್ಕನಾಯಕಹಳ್ಳಿ ತಾಲ್ಲೂಕಿನ ಹುಳಿಯಾರಿನ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಯಗಚಿಹಳ್ಳಿ ಹಾಗೂ ಅಣೇಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ADVERTISEMENT

ಮಕ್ಕಳ ಕ್ರಿಯಾಶೀಲತೆ ಮತ್ತು ಶಿಕ್ಷಕರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಗಮನಿಸಿ ಈ ಆಯ್ಕೆ ನಡೆದಿದೆ. ಚಿಕ್ಕನಾಯಕಹಳ್ಳಿಯ ಮಾಸ್ ಟ್ರಸ್ಟ್, ಬೋರನಕಣಿವೆ ಸುವರ್ಣ ವಿದ್ಯಾಚೇತನ ಮತ್ತು ಶಾಲಾಭಿವೃದ್ಧಿ ಸಮಿತಿಗಳು ನಮ್ಮ ಸಂಸ್ಥೆ ಜತೆ ಕೈಜೋಡಿಸಿವೆ ಎಂದು ಹೇಳಿದರು.

ಮಾಸ್ ಟ್ರಸ್ಟ್ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕು ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಎನ್. ಇಂದಿರಮ್ಮ, ಸುವರ್ಣ ವಿದ್ಯಾಚೇತನದ ಅಧ್ಯಕ್ಷ ರಾಮಕೃಷ್ಣಪ್ಪ, ಸೃಜನಾ ಅಧ್ಯಕ್ಷೆ ಪೂರ್ಣಮ್ಮಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.