ADVERTISEMENT

ಅಫೀಮು ಮಾರಾಟ; ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 14:10 IST
Last Updated 7 ಸೆಪ್ಟೆಂಬರ್ 2020, 14:10 IST

ತುಮಕೂರು: ನಗರದ ಬಿ.ಜಿ.ಪಾಳ್ಯ ವೃತ್ತ-ಸಂತೆಪೇಟೆ ಮಾರ್ಗದ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಹನುಮಂತರಾಯಪ್ಪ ಎಂಬುವವರ ಮಾಲೀಕತ್ವದ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು ಒಂದೂವರೆ ಕೆ.ಜಿ ತೂಕದ ₹ 3 ಲಕ್ಷ ಮೌಲ್ಯದ ಅಫೀಮನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ರಾಜಸ್ತಾನದ ರಾಜು, ಮತ್ತು ನರಸಿರಾಮ್ ಬಂಧಿತರು. ನಗರ ಪೊಲೀಸ್‌‌‌‌ ವೃತ್ತ ನಿರೀಕ್ಷಕ ಬಿ.ನವೀನ್ ಅವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸೋಮವಾರ ಮಧ್ಯಾಹ್ನ ದಾಳಿ ನಡೆಸಿದ್ದರು. ಮಾರಾಟದ ಉದ್ದೇಶಕ್ಕಾಗಿ ಎರಡು ಪ್ಲಾಸ್ಟಿಕ್‌‌‌‌ ಕವರ್‌ನಲ್ಲಿ ಅಫೀಮನ್ನು ಸುತ್ತಿಟ್ಟಿದ್ದರು.

ಪಿಎಸ್‌ಐ ಬಿ.ಸಿ.ಮಂಜುನಾಥ, ಎ.ಎಸ್‌.ಐ ರಮೇಶ್‌, ಸಿಬ್ಬಂದಿಗಳಾದ ಈರಣ್ಣ, ಏಜಾಜ್, ನಾಗರಾಜು, ಜಗದೀಶ್‌, ರಾಜಣ್ಣ, ಜೈಪ್ರಕಾಶ್, ನವೀನ್‌ಕುಮಾರ್, ರಾಮಚಂದ್ರಯ್ಯ ಮತ್ತು ಶಿವಶಂಕರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.