ADVERTISEMENT

ತುಮಕೂರು | ದುಬೈನಲ್ಲಿ ಚಿನ್ನದ ವ್ಯಾಪಾರ ಆಮಿಷ: ₹8 ಕೋಟಿ ವಂಚನೆ

ಉದ್ಯಮಿ ಕುಟುಂಬದ ಐವರ ವಿರುದ್ಧ ಎಫ್‌ಐಆರ್‌; ಹೆಚ್ಚಿನ ಲಾಭಾಂಶದ ಆಮಿಷ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 5:49 IST
Last Updated 26 ಆಗಸ್ಟ್ 2025, 5:49 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ತುಮಕೂರು: ಚಿನ್ನದ ವ್ಯಾಪಾರದಲ್ಲಿ ಹಣ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಅಧಿಕ ಲಾಭಾಂಶ ನೀಡಲಾಗುವುದು ಎಂಬ ಬೆಂಗಳೂರು ಉದ್ಯಮಿಯೊಬ್ಬರ ಮಾತಿಗೆ ಮರುಳಾದ ನಗರದ ನಾಲ್ವರು ಉದ್ಯಮಿಗಳು ₹7.75 ಕೋಟಿ ಕಳೆದುಕೊಂಡಿದ್ದಾರೆ.

ನಗರದ ಬಾರ್‌ಲೈನ್‌ ರಸ್ತೆಯ ಅಕ್ಬರ್‌ ಇಲಿಯಾಜ್‌ ಅಹ್ಮದ್‌ ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಉದ್ಯಮಿ ಅಬ್ದುಲ್‌ ಕರೀಂ, ಪತ್ನಿ ಜೀನತ್‌, ಮಗ ಮಹ್ಮದ್‌ ಇಬ್ರಾಹಿಂ, ಮಗಳು ಖತೀಜಾ ಫಿಜಾ, ಅಳಿಯ ರಿಜ್ವಾನ್‌ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬ್ಯಾಂಕ್‌ ವಿವರ ಪಡೆಯಲಾಗುವುದು. ವಂಚಿಸಿದ ಉದ್ಯಮಿ ದುಬೈನಲ್ಲಿ ಇರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ದುಬೈನಲ್ಲಿ ಆರೋಪಿ

ವಂಚನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬ್ಯಾಂಕ್‌ ವಿವರ ಪಡೆಯಲಾಗುವುದು. ವಂಚಿಸಿದ ಉದ್ಯಮಿ ದುಬೈನಲ್ಲಿ ಇರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಆರೋಪಿ ಚಿನ್ನದ ವ್ಯಾಪಾರದಲ್ಲಿ ಹೂಡಿಕೆ ಮಾಡಲು ಹಣ ಕೇಳಿದ್ದಾರೆ. ಹೆಚ್ಚಿನ ಲಾಭ ನೀಡಲಾಗುವುದು ಎಂದು ನಂಬಿಸಲು ಮೊದಲು ಒಂದಷ್ಟು ಹಣ ವಾಪಸ್‌ ಕೊಟ್ಟಿದ್ದಾರೆ. ಇದನ್ನು ನೋಡಿ ಉಳಿದವರು ಸಹ ಹೂಡಿಕೆ ಮಾಡಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.