ADVERTISEMENT

ಅತ್ಯಂತ ಹೆಚ್ಚು ಅಂಕ : ತಾಯಿಯ ಕಾಳಜಿ ಕಾರಣ

​ಪ್ರಜಾವಾಣಿ ವಾರ್ತೆ
Published 1 ಮೇ 2019, 10:48 IST
Last Updated 1 ಮೇ 2019, 10:48 IST
ಸಿಂಚನ ಎನ್.ಮಾಕಂ
ಸಿಂಚನ ಎನ್.ಮಾಕಂ   

‘ನನ್ನ ತಂದೆ ನಾನು ಕೇಳಿದ ಎಲ್ಲ ಪಠ್ಯ ಸಾಮಗ್ರಿಗಳನ್ನು ಕೊಡಿಸುತ್ತಿದ್ದರು. ನಾನು ಓದುವಾಗ ನನ್ನ ತಾಯಿಯೂ ನನ್ನ ಎದುರೇ ಕುಳಿತುಕೊಳ್ಳುತ್ತಿದ್ದರು. ನಾನು ನಿದ್ದೆಗೆಟ್ಟಷ್ಟೇ ಅವರೂ ನಿದ್ದೆಗೆಡುತ್ತಿದ್ದರು’ ಎಂದು ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದ ಪಾವಗಡದ ಜ್ಞಾನಬೋಧಿನಿ ಶಾಲೆಯ ಸಿಂಚನ ಎನ್.ಮಾಕಂ ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಂಚನ 625ಕ್ಕೆ 622 ಅಂಕ ಪಡೆದಿದ್ದಾರೆ. ಅವರ ತಂದೆ ನಾಗೇಶ್ ಪಟ್ಟಣದಲ್ಲಿ ಟಿವಿಎಸ್ ಶೋ ರೂಂ ನಡೆಸುವರು.

‘ಯಾವುದೇ ಸಮಯದಲ್ಲಿ ಕರೆ ಮಾಡಿದರೂ ಶಿಕ್ಷಕರು ಮಾಹಿತಿ ನೀಡುತ್ತಿದ್ದರು. ಶಾಲೆಯಲ್ಲಿ ಓದುವ ವಾತಾವರಣ ಉತ್ತಮವಾಗಿತ್ತು. ನನ್ನ ಸಾಧನೆಗೆ ಕಠಿಣ ಪರಿಶ್ರಮ ಕಾರಣ’ ಎಂದರು.

ADVERTISEMENT

‘ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದು ಸಂತಸ ತಂದಿದೆ’ ಎಂದು ನಾಗೇಶ್ ಖುಷಿಪಟ್ಟರು. ನನ್ನ ಪತ್ನಿ ರೂಪಾ ಮಗಳ ಸಾಧನೆಗೆ ಬೆನ್ನೆಲುಬಾಗಿ ಇದ್ದರು. ದಿನಕ್ಕೆ 8 ಗಂಟೆಗೂ ಹೆಚ್ಚಿನ ಸಮಯ ಅಭ್ಯಾಸ ಮಾಡುತ್ತಿದ್ದಳು. ಮುಂದಿನ ದಿನಗಳಲ್ಲಿ ಉತ್ತಮ ಶಿಕ್ಷಣ ಕೊಡಿಸುವ ಆಶಯ ಇದೆ’ ಎಂದು ಮಗಳ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.