ADVERTISEMENT

ಮನೆ ಗೋಡೆ ಕುಸಿತ: ಟ್ರ್ಯಾಕ್ಟರ್ ಜಖಂ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 6:42 IST
Last Updated 15 ನವೆಂಬರ್ 2021, 6:42 IST
ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಹೋಬಳಿಯ ಡೊಂಕಿಹಳ್ಳಿಯಲ್ಲಿ ಮಳೆಗೆ ಮನೆಯ ಗೋಡೆಯೊಂದು ಕುಸಿದಿದ್ದು, ಟ್ರ್ಯಾಕ್ಟರ್ ಜಖಂ ಆಗಿದೆ
ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಹೋಬಳಿಯ ಡೊಂಕಿಹಳ್ಳಿಯಲ್ಲಿ ಮಳೆಗೆ ಮನೆಯ ಗೋಡೆಯೊಂದು ಕುಸಿದಿದ್ದು, ಟ್ರ್ಯಾಕ್ಟರ್ ಜಖಂ ಆಗಿದೆ   

ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿಯ ಡೊಂಕಿಹಳ್ಳಿಯಲ್ಲಿ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದು ಟ್ರ್ಯಾಕ್ಟರ್ ಸಂಪೂರ್ಣ ಜಖಂ ಆಗಿದೆ.

ತಾಲ್ಲೂಕಿನಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯಿಂದ ಡೊಂಕಿಹಳ್ಳಿಯ ದೇವರಾಜು ಎಂಬುವರಿಗೆ ಸೇರಿದ ಹೆಂಚಿನ ಮನೆಯ ಗೋಡೆ ಬೆಳಿಗ್ಗೆ ಕುಸಿದು ಬಿದ್ದಿದೆ. ಇದೇ ವೇಳೆ ಮನೆಯ ಪಕ್ಕವೇ ನಿಲ್ಲಿಸಿದ್ದ ಗಂಗಾಧರ್ ಎಂಬುವರಿಗೆ ಸೇರಿದ ಟ್ರ್ಯಾಕ್ಟರ್ ಮೇಲೆ ಗೋಡೆ ಬಿದ್ದಿದೆ. ಇದರಿಂದ ಟ್ರ್ಯಾಕ್ಟರ್‌ನ ಎಂಜಿನ್ ಮತ್ತು ಟ್ರೈಲರ್ ಸಹ ಜಖಂಗೊಂಡಿದೆ.

‘ಮಳೆಯಿಂದ ಮನೆ ಮತ್ತು ಟ್ರ್ಯಾಕ್ಟರ್ ಎರಡೂ ಹಾಳಾಗಿದೆ. ಸುಮಾರು ₹ 4 ಲಕ್ಷ ನಷ್ಟ ಸಂಭವಿಸಿದೆ. ಆದ್ದರಿಂದ ಸರ್ಕಾರ ಪ್ರಕೃತಿ ವಿಕೋಪದಡಿ ದೇವರಾಜು ಮತ್ತು ಗಂಗಾಧರ್ ಅವರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ವರದಿ ನೀಡಬೇಕು’ ಎಂದು ಟಿಎಪಿಸಿಎಂಎಸ್ ನಿರ್ದೇಶಕ ಡಿ.ಪಿ.ರಾಜುಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.