ADVERTISEMENT

ದಸರಾ ಕ್ರೀಡಾಕೂಟ: ಶಿವಮೊಗ್ಗ ಆಟಗಾರರ ಪ್ರಾಬಲ್ಯ

ವಿಭಾಗ ಮಟ್ಟದ ದಸರಾ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 5:53 IST
Last Updated 13 ಸೆಪ್ಟೆಂಬರ್ 2025, 5:53 IST
ತುಮಕೂರಿನಲ್ಲಿ ಶುಕ್ರವಾರ ನಡೆದ ವಿಭಾಗೀಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಜಾವೆಲಿನ್‌ ಎಸೆದ ಕ್ರೀಡಾಪಟು
ಚಿತ್ರಗಳು: ಚಂದನ್‌
ತುಮಕೂರಿನಲ್ಲಿ ಶುಕ್ರವಾರ ನಡೆದ ವಿಭಾಗೀಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಜಾವೆಲಿನ್‌ ಎಸೆದ ಕ್ರೀಡಾಪಟು ಚಿತ್ರಗಳು: ಚಂದನ್‌   

ತುಮಕೂರು: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ನಡೆಯಿತು. ಮೊದಲ ದಿನ ಶಿವಮೊಗ್ಗ ಕ್ರೀಡಾಪಟುಗಳು ಪ್ರಾಬಲ್ಯ ಮೆರೆದರು.

ಫಲಿತಾಂಶ: ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರ ವಿವರ.

ಮಹಿಳೆಯರ ವಿಭಾಗ: 100 ಮೀಟರ್‌ ಓಟ– ಬಿ.ಪ್ರಕೃತಿ ರೂಪಾರಾವ್‌ (ಚಿತ್ರದುರ್ಗ), ಅಮೂಲ್ಯ (ತುಮಕೂರು), ಎಸ್‌.ಖುಷಿ (ಶಿವಮೊಗ್ಗ). 800 ಮೀಟರ್‌– ರಶ್ಮಿತಾ ಗೌಡ (ರಾಮನಗರ), ಯು.ದಿವ್ಯಾ (ಬೆಂಗಳೂರು ಗ್ರಾಮಾಂತರ), ಎಚ್‌.ಎಸ್‌.ಅಪೂರ್ವ (ಶಿವಮೊಗ್ಗ). 1,500 ಮೀಟರ್‌ ಓಟ– ಪ್ರಣತಿ (ಬೆಂಗಳೂರು ಗ್ರಾಮಾಂತರ), ಎಚ್‌.ವಿ.ದೀಕ್ಷಾ (ಶಿವಮೊಗ್ಗ), ಮಹಾದೇವಿ (ತುಮಕೂರು). 3 ಸಾವಿರ ಮೀಟರ್‌ ಓಟ– ಪ್ರಣತಿ (ಬೆಂಗಳೂರು ಗ್ರಾಮಾಂತರ), ಮಹಾದೇವಿ (ತುಮಕೂರು), ಎಚ್‌.ವಿ.ದೀಕ್ಷಾ (ಶಿವಮೊಗ್ಗ).

ADVERTISEMENT

ಡಿಸ್ಕಸ್‌ ಥ್ರೋ– ಎನ್‌.ಯು.ನೇಹಾ (ಬೆಂಗಳೂರು ಗ್ರಾಮಾಂತರ), ಪ್ರಿಯಾಂಕಾ (ಶಿವಮೊಗ್ಗ), ಎನ್‌.ಆರ್‌.ವರ್ಷಾ (ಶಿವಮೊಗ್ಗ). ಗುಂಡು ಎಸೆತ– ಟಿ.ಎಸ್‌.ಮಿಥಾಲಿ (ಶಿವಮೊಗ್ಗ), ಎಚ್‌.ಟಿ.ಅಮೃತ (ಚಿಕ್ಕಬಳ್ಳಾಪುರ), ಶಶಿಕಲಾ (ಕೋಲಾರ). ಜಾವೆಲಿನ್‌ ಥ್ರೋ– ಪದ್ಮಾವತಿ (ಶಿವಮೊಗ್ಗ), ಎನ್‌.ಯು.ನೇಹಾ (ಬೆಂಗಳೂರು ಗ್ರಾಮಾಂತರ), ಎಂ.ಸೌಜನ್ಯ (ಬೆಂಗಳೂರು ಗ್ರಾಮಾಂತರ).

ಎತ್ತರ ಜಿಗಿತ– ಅನ್ವಿತಾ (ಶಿವಮೊಗ್ಗ), ಪದ್ಮಾವತಿ (ಶಿವಮೊಗ್ಗ), ವಿ.ಮಾನಸ (ಕೋಲಾರ). ತ್ರಿವಿಧ ಜಿಗಿತ– ಅಮೂಲ್ಯ (ಶಿವಮೊಗ್ಗ), ಟಿ.ನೀತು (ಬೆಂಗಳೂರು ಗ್ರಾಮಾಂತರ). ಉದ್ದ ಜಿಗಿತ– ಪ್ರಾಪ್ತಿ (ತುಮಕೂರು), ಕೆ.ಜೆ.ಸಿರಿ (ಶಿವಮೊಗ್ಗ), ಅಮೂಲ್ಯ (ಶಿವಮೊಗ್ಗ).

ಪುರುಷರ ವಿಭಾಗ: 100 ಮೀಟರ್‌ ಓಟ– ಗೌತಮ್‌ (ಶಿವಮೊಗ್ಗ), ಧನಂಜಯ (ಶಿವಮೊಗ್ಗ), ಚರಣ್‌ (ರಾಮನಗರ). 200 ಮೀಟರ್‌– ಎಂ.ಡಿ.ದರ್ಶನ್‌ (ಶಿವಮೊಗ್ಗ), ಎಸ್‌.ಚರಣ್‌ (ರಾಮನಗರ), ಶಶಾಂಕ್‌ ವರ್ಮ (ತುಮಕೂರು). 800 ಮೀಟರ್‌– ಆಶ್ರೀಶ್‌ (ಶಿವಮೊಗ್ಗ), ಎಂ.ಸಿ.ರೋಹಿತ್‌ಕುಮಾರ್‌ (ತುಮಕೂರು), ತೇಜಸ್‌ (ಶಿವಮೊಗ್ಗ). 1,500 ಮೀಟರ್‌– ಆಶ್ರೀಶ್‌ (ಶಿವಮೊಗ್ಗ), ಎಚ್‌.ಎ.ದರ್ಶನ್‌ (ತುಮಕೂರು), ಜೋಶುವಾ (ಚಿತ್ರದುರ್ಗ). 5 ಸಾವಿರ ಮೀಟರ್‌– ಚಿರೇಶ್‌ಗೌಡ (ತುಮಕೂರು), ಕೃಷ್ಣಪ್ಪ (ದಾವಣಗೆರೆ), ಎಂ.ಕೆ.ವಿದ್ಯಾಸಾಗರ್‌ (ಕೋಲಾರ).

ಡಿಸ್ಕಸ್‌ ಥ್ರೋ– ಶಂಕರ್‌ (ಬೆಂಗಳೂರು ಗ್ರಾಮಾಂತರ), ಜಿ.ಯು.ನವಾಜ್‌ (ಚಿಕ್ಕಬಳ್ಳಾಪುರ), ನಿತಿನ್‌ರೆಡ್ಡಿ (ಬೆಂಗಳೂರು ಗ್ರಾಮಾಂತರ). ಗುಂಡು ಎಸೆತ– ಎಂ.ಮನೋಜ್‌ (ಶಿವಮೊಗ್ಗ), ಶರತ್‌ಕುಮಾರ್‌ (ಕೋಲಾರ), ನಿತಿನ್‌ರೆಡ್ಡಿ (ಬೆಂಗಳೂರು ಗ್ರಾಮಾಂತರ). ಜಾವೆಲಿನ್‌ ಥ್ರೋ– ಎಸ್‌.ಆರ್‌.ನಾರಾಯಣಸ್ವಾಮಿ (ಕೋಲಾರ), ಕೆ.ನಿತಿನ್‌ (ತುಮಕೂರು), ಮಲ್ಲಿಕಾರ್ಜುನ (ಬೆಂಗಳೂರು ಗ್ರಾಮಾಂತರ).

ಎತ್ತರ ಜಿಗಿತ– ಸುದೀಪ್‌ (ಶಿವಮೊಗ್ಗ), ಕೆ.ದರ್ಶನ್‌ (ಬೆಂಗಳೂರು ಗ್ರಾಮಾಂತರ), ಮಣಿಕಾಂತ್‌ ಗೌಡ (ಶಿವಮೊಗ್ಗ). ಉದ್ದ ಜಿಗಿತ– ಟಿ.ಲೋಹಿಯಾ (ಚಿತ್ರದುರ್ಗ), ಮೊಹಮ್ಮದ್‌ ಮುಟ್ಟಾಮೀರ್‌ (ಶಿವಮೊಗ್ಗ), ವಿ.ಜಿ.ಧನುಷ್ (ಕೋಲಾರ).

ಮಹಿಳೆಯರ ವಿಭಾಗದ ಕಬಡ್ಡಿ ಪಂದ್ಯಾವಳಿಯಲ್ಲಿ ರಾಮನಗರ ತಂಡ ಶಿವಮೊಗ್ಗ ತಂಡವನ್ನು ಮಣಿಸಿ ರಾಜ್ಯ ಮಟ್ಟಕ್ಕೆ ಅರ್ಹತೆ ಪಡೆಯಿತು. ವಾಲಿಬಾಲ್‌ನಲ್ಲಿ ದಾವಣಗೆರೆ ತಂಡ ಮೊದಲ ಸ್ಥಾನ ಪಡೆದರೆ, ಶಿವಮೊಗ್ಗ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ಜಿಗಿತದ ಒಂದು ಭಂಗಿ
ಕ್ರೀಡಾಕೂಟದಲ್ಲಿ ಓಟ ಸ್ಪರ್ಧೆ
ಗಮನ ಸೆಳೆದ ಕಬಡ್ಡಿ ಪಂದ್ಯಾವಳಿ
ಕಬಡ್ಡಿ ಫೈನಲ್‌ ಪಂದ್ಯ ಗೆದ್ದ ರಾಮನಗರ ತಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.