ADVERTISEMENT

ಉನ್ನತ ಶಿಕ್ಷಣ ಸಂಸ್ಥೆ ಎಕ್ಸ್‌ಪ್ರೆಸ್‌ ಬಸ್‌ ಇದ್ದಂತೆ: ಸಚಿವ ಜೆ.ಸಿ.ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 19:13 IST
Last Updated 29 ಸೆಪ್ಟೆಂಬರ್ 2019, 19:13 IST
ಜೆ.ಸಿ.ಮಾಧುಸ್ವಾಮಿ
ಜೆ.ಸಿ.ಮಾಧುಸ್ವಾಮಿ   

ತುಮಕೂರು: ‘ರಾಜ್ಯದಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳು ಎಕ್ಸ್‌ಪ್ರೆಸ್‌ ಬಸ್‌ಗಳಿದ್ದಂತೆ. ನಮ್ಮ ಊರ ದಾರಿಯಲ್ಲಿಯೇ ಓಡಾಡುತ್ತಿರುತ್ತವೆ. ಆದರೆ, ನಮ್ಮ ಮಕ್ಕಳಿಗೆನೇ ಅವುಗಳಲ್ಲಿ ಸೀಟು ಸಿಗುವುದಿಲ್ಲ’ ಎಂದು ಕಾನೂನು, ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಗುರು ಸಿದ್ಧರಾಮೇಶ್ವರ ಸೇನೆ, ಜಿ.ಎಸ್.ಎಸ್.ಟ್ರಸ್ಟ್ ಆಯೋಜಿಸಿದ್ದ ‘ನೊಳಂಬರ ಶಾಸನಗಳು ಗ್ರಂಥ ಬಿಡುಗಡೆ ಮತ್ತು ನೊಳಂಬ ಸಂಸ್ಕೃತಿ ಸಂಶೋಧಾನಾ ನಿಧಿ ಸಂಗ್ರಹ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ನಮ್ಮ ನೆಲ, ಜಲ, ವಿದ್ಯುತ್‌ ಮತ್ತು ಅನುದಾನ ಪಡೆಯುವ ಆ ವಿದ್ಯಾಸಂಸ್ಥೆಗಳು ಹೊರ ರಾಜ್ಯದವರ ಅಧ್ಯಯನಕ್ಕೆ ಅವಕಾಶ ಮಾಡಿಕೊಡುತ್ತಿವೆ. ನಾವು ಮಾತ್ರ ಎಕ್ಸ್‌ಲೆನ್ಸ್‌ ಆದ ಸಂಸ್ಥೆಗಳು ನಮ್ಮ ಬೆಂಗಳೂರಿನಲ್ಲಿವೆ ಎಂದು ಬೀಗುತ್ತಿದ್ದೇವೆ. ಅವುಗಳಿಂದ ನಮ್ಮವರಿಗೆ ನಯಾಪೈಸೆ ಅನುಕೂಲ ಆಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಮೊನ್ನೆ ನ್ಯಾಷನಲ್‌ ಲಾ ಸ್ಕೂಲ್‌ಗೆ ಹೋಗಿದ್ದೆ. ಅಲ್ಲಿ ನಮ್ಮ ಒಬ್ಬ ವಿದ್ಯಾರ್ಥಿಯೂ ಇಲ್ಲ. ಅವರಿಗೆ ವರ್ಷಕ್ಕೆ ₹ 2 ಕೋಟಿ ಅನುದಾನ ಬೇರೆ ನಾವೇ ಕೊಡಬೇಕಂತೆ. ಸೌಕರ್ಯಗಳನ್ನು ಕೊಡುವವರು ನಾವು, ಅವುಗಳ ಸದುಪಯೋಗ ಪಡೆಯುವವರು ಬೇರೆಯವರು. ಇದ್ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

* ವೀರಶೈವ ಮಠಗಳು ಸಾಕ್ಷರತೆ ಹೆಚ್ಚಳಕ್ಕೆ ಅಪಾರ ಕೊಡುಗೆ ನೀಡಿವೆ. ಅವುಗಳ ಶಕ್ತಿ ಈಗ ಕುಂದುತ್ತಿದೆ. ಅವುಗಳನ್ನು ಬೆಳೆಸಲು ಶ್ರಮಿಸಬೇಕು.

-ಜೆ.ಸಿ.ಮಾಧುಸ್ವಾಮಿ, ಕಾನೂನು, ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.