ADVERTISEMENT

ಶಾಂತಿಯುತ ಮತದಾನಕ್ಕೆ ಸಕಲ ವ್ಯವಸ್ಥೆ: ಚುನಾವಣೆ ಹಬ್ಬಕ್ಕೆ ಕ್ಷಣಗಣನೆ

ಲೋಕಸಭೆ ಚುನಾವಣೆ: 22.97 ಲಕ್ಷ ಮತದಾರರಿಂದ ಮತದಾನ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 14:24 IST
Last Updated 17 ಏಪ್ರಿಲ್ 2019, 14:24 IST
ತುಮಕೂರಿನಲ್ಲಿ ಬುಧವಾರ ಚುನಾವಣಾ ಸಾಮಗ್ರಿಗಳೊಂದಿಗೆ ಮತಗಟ್ಟೆ ಸಿಬ್ಬಂದಿ ನಿರ್ದಿಷ್ಟ ಮತಗಟ್ಟೆಗೆ ತೆರಳಿದ ನೋಟ
ತುಮಕೂರಿನಲ್ಲಿ ಬುಧವಾರ ಚುನಾವಣಾ ಸಾಮಗ್ರಿಗಳೊಂದಿಗೆ ಮತಗಟ್ಟೆ ಸಿಬ್ಬಂದಿ ನಿರ್ದಿಷ್ಟ ಮತಗಟ್ಟೆಗೆ ತೆರಳಿದ ನೋಟ   

ತುಮಕೂರು: ಲೋಕಸಭಾ ಚುನಾವಣೆ ಗುರುವಾರ (ಏ.18) ಜಿಲ್ಲೆಯಲ್ಲಿ ನಡೆಯಲಿದ್ದು, ಚುನಾವಣೆಯನ್ನು ಶಾಂತಿ, ಸುವ್ಯವಸ್ಥೆ ಮತ್ತು ಅಚ್ಚುಕಟ್ಟಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಚುನಾವಣಾಧಿಕಾರಿಗಳು ಕೈಗೊಂಡಿದ್ದಾರೆ. 2,684 ಮತಗಟ್ಟೆಗಳಲ್ಲಿ 22.97 ಲಕ್ಷ ಮತದಾರರು ಮತದಾನ ಮಾಡಲಿದ್ದಾರೆ.

ಜಿಲ್ಲೆಯಲ್ಲಿ ಮತದಾನವನ್ನು ಶಾಂತಿಯುತವಾಗಿ ನಡೆಸುವ ದೃಷ್ಟಿಯಿಂದ ಏ.16ರ ಸಂಜೆ 6ರಿಂದಲೇ ಕಲಂ 144 ಅನ್ವಯ ನಿಷೇಧಾಜ್ಞೆಯನ್ನು ಚುನಾವಣಾಧಿಕಾರಿ ಜಾರಿಗೊಳಿಸಿದ್ದು, ಇಂದು (ಏ.18) ಮಧ್ಯರಾತ್ರಿಯವರೆಗೆ ಜಾರಿಯಲ್ಲಿರುತ್ತದೆ ಎಂದು ಹೇಳಿದ್ದಾರೆ.

ಮತಗಟ್ಟೆಗಳಿಗೆ ತೆರಳಿದ ಸಿಬ್ಬಂದಿ: ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಮತಗಟ್ಟೆ ಅಧಿಕಾರಿ, ಸಿಬ್ಬಂದಿ ತಾವು ಕರ್ತವ್ಯ ನಿರ್ವಹಿಸುತ್ತಿರುವ ತಾಲ್ಲೂಕು ಕೇಂದ್ರ ಸ್ಥಾನದಲ್ಲಿನ ಚುನಾವಣಾ ಸಾಮಗ್ರಿ ವಿತರಣಾ ಘಟಕದಿಂದ( ಮಸ್ಟರಿಂಗ್ ಕೇಂದ್ರ) ನಿರ್ದಿಷ್ಟ ಮತಗಟ್ಟೆಗಳಿಗೆ ಮತಪತ್ರ ಘಟಕ (ಬ್ಯಾಲೆಟ್ ಯುನಿಟ್), ಮತ ದಾಖಲು ಯಂತ್ರ (ಕಂಟ್ರೋಲ್ ಯುನಿಟ್) ಹಾಗೂ ಮತ ಖಾತ್ರಿ ಯಂತ್ರ (ವಿವಿಪ್ಯಾಟ್) ಸೇರಿದಂತೆ ಚುನಾವಣಾ ಸಾಮಗ್ರಿಗಳೊಂದಿಗೆ ಪೊಲೀಸ್ ಭದ್ರತೆಯೊಂದಿಗೆ ಚುನಾವಣಾ ಕಾರ್ಯಕ್ಕೆ ಪಡೆಯಲಾದ ಸಾರಿಗೆ ಸಂಸ್ಥೆಯ ಬಸ್, ಖಾಸಗಿ ಶಿಕ್ಷಣ ಸಂಸ್ಥೆಗಳ ವಾಹನಗಳಲ್ಲಿ ತೆರಳಿದರು.

ADVERTISEMENT

ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಧ್ಯಾಹ್ನದ ಹೊತ್ತಿಗೆ ಎಲ್ಲ ಚುನಾವಣಾ ಸಿಬ್ಬಂದಿ ಮಸ್ಟರಿಂಗ್ ಕೇಂದ್ರದಿಂದ ತೆರಳಿದ್ದರು.

ಯಾವ್ಯಾವ ಮಸ್ಟರಿಂಗ್ ಕೇಂದ್ರಗಳು

ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ತ ಮತಗಟ್ಟೆಗಳಿಗೆ ಚಿಕ್ಕನಾಯಕನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ, ತಿಪಟೂರು ಕ್ಷೇತ್ರ ವ್ಯಾಪ್ತಿ ಮತಗಟ್ಟೆಗಳಿಗೆ ತಿಪಟೂರಿನ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ತುರುವೇಕೆರೆ ಕ್ಷೇತ್ರ ವ್ಯಾಪ್ತಿ ಮತಗಟ್ಟೆಗಳಿಗೆ ತುರುವೇಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಮಧುಗಿರಿ ಕ್ಷೇತ್ರ ವ್ಯಾಪ್ತಿಗೆ ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು ನಗರ ಕ್ಷೇತ್ರ ವ್ಯಾಪ್ತಿಗೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಗೆ ಸರ್ವೋದಯ ಬಾಲಕಿಯರ ಪ್ರೌಢ ಶಾಲೆ,ಕೊರಟಗೆರೆ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಗುಬ್ಬಿ ಕ್ಷೇತ್ರ ವ್ಯಾಪ್ತಿಗೆ ಗುಬ್ಬಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಮಸ್ಟರಿಂಗ್ ಕೇಂದ್ರ) ಚುನಾವಣಾ ಸಾಮಗ್ರಿಗಳನ್ನುಸಹಾಯಕ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ವಿತರಿಸಲಾಯಿತು.

ಇವಿಎಂ, ವಿವಿಪ್ಯಾಟ್‌ : ಜಿಲ್ಲೆಯ 11 ವಿಧಾಸಭಾ ಕ್ಷೇತ್ರಗಳಿಗೆ 3472 ಬ್ಯಾಲೆಟ್ ಯುನಿಟ್, 3472 ಕಂಟ್ರೋಲ್ ಯುನಿಟ್, 3426 ವಿವಿಪ್ಯಾಟ್ ಗಳನ್ನು ಹಂಚಿಕೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಒಟ್ಟು ಮತಗಟ್ಟೆಗಳು

1907 ತುಮಕೂರು ಲೋಕಸಭಾ ಕ್ಷೇತ್ರದ ಮತಗಟ್ಟೆಗಳು
513 ಚಿತ್ರದುರ್ಗ ಲೋಕಸಭಾ ಕ್ಷೇತ್ರ ಮತಗಟ್ಟೆಗಳು
264 ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ

ಅಂಕಿ ಅಂಶಗಳು

22.97 ಲಕ್ಷಜಿಲ್ಲೆಯಲ್ಲಿರುವ ಮತದಾರರು

16.8 ಲಕ್ಷ ತುಮಕೂರು ಕ್ಷೇತ್ರದಲ್ಲಿರುವ ಮತದಾರರು

8.3 ಲಕ್ಷ ಪುರುಷ ಮತದಾರರು

8.4 ಲಕ್ಷ ಮಹಿಳಾ ಮತದಾರರು

120 ಲೈಂಗಿಕ ಅಲ್ಪಸಂಖ್ಯಾತರು

41.8 ಸಾವಿರ ಚಿತ್ರದುರ್ಗ ಕ್ಷೇತ್ರ ವ್ಯಾಪ್ತಿಯ ಶಿರಾ, ಪಾವಗಡ ಮತದಾರರು

19.9 ಲಕ್ಷ ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಕುಣಿಗಲ್ ನ ಮತದಾರರು

ವಿಧಾನಸಭಾವಾರು ಮತಗಟ್ಟೆಗಳು

ಕ್ಷೇತ್ರ ಮತಗಟ್ಟೆಗಳು
ಚಿ.ನಾ.ಹಳ್ಳಿ 262
ತಿಪಟೂರು 233
ತುರುವೇಕೆರೆ 229
ತುಮಕೂರುನಗರ 254
ತುಮಕೂರು ಗ್ರಾಮಾಂತರ 226
ಕೊರಟಗೆರೆ 242
ಗುಬ್ಬಿ 213
ಮಧುಗಿರಿ 248
*
ಕುಣಿಗಲ್ 264
ಶಿರಾ 267
ಪಾವಗಡ 246

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.