ADVERTISEMENT

ಗಣೇಶ ಹಬ್ಬ; ಅನುಮತಿ ಇಲ್ಲದೆ ವಿದ್ಯುತ್ ಬಳಸುವಂತಿಲ್ಲ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 14:44 IST
Last Updated 21 ಆಗಸ್ಟ್ 2020, 14:44 IST

ತುಮಕೂರು: ತಾಲ್ಲೂಕಿನ ಕೋರ ಹಾಗೂ ಬೆಳ್ಳಾವಿ ಹೋಬಳಿಯ ಗ್ರಾಮಗಳಲ್ಲಿ ಗಣೇಶ ಹಬ್ಬಕ್ಕೆ ಹಾಕುವ ಪೆಂಡಾಲ್‌ಗಳಿಗೆ ಪೂರ್ವಾನುಮತಿ ಪಡೆಯದೆ ವಿದ್ಯುತ್ ಬಳಕೆ ಮಾಡಬಾರದು ಎಂದು ಗಣೇಶ ಉತ್ಸವದ ಸಂಘಟಕರಿಗೆ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮೆಹಬೂಬ್ ಷರೀಫ್ ಸೂಚಿಸಿದ್ದಾರೆ.

ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳ ಹಾಗೂ ಮೆರವಣಿಗೆ ಮಾಡುವ ಸ್ಥಳದ ವಿದ್ಯುತ್ ಸುರಕ್ಷತಾ ಕ್ರಮದ ಬಗ್ಗೆ ಲಿಖಿತವಾಗಿ ಪತ್ರ ನೀಡಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ವಿದ್ಯುತ್ ಸಂಪರ್ಕ ಪಡೆಯಬೇಕು. ಕೈಗೊಂಡ ಕ್ರಮಗಳ ಬಗ್ಗೆ ಗ್ರಾಮಗಳ ಕ್ಯಾಂಪ್ ಲೈನ್‌ಮೆನ್ ಮತ್ತು ಶಾಖಾಧಿಕಾರಿಗಳ ಗಮನಕ್ಕೆ ತರಬೇಕು.

ನಿಯಮಗಳನ್ನು ಪಾಲನೆ ಮಾಡುವಲ್ಲಿ ಸಂಘಟಕರು ವಿಫಲವಾದಲ್ಲಿ ಮತ್ತು ಇದರಿಂದ ಯಾವುದಾದರು ವಿದ್ಯುತ್‌ಗೆ ಸಂಬಂಧಿಸಿದ ಅಪಘಾತಗಳು ಸಂಭವಿಸಿದಲ್ಲಿ ಘಟನೆ ನಡೆದ ಸ್ಥಳದ ಗಣೇಶ ಪೆಂಡಾಲಿನ ವ್ಯವಸ್ಥಾಪಕರೇ ನೇರ ಹೊಣೆಗಾರರಾಗಿರುತ್ತಾರೆ. ಬೆಸ್ಕಾಂಕಂಪೆನಿಯು ಯಾವುದೇ ರೀತಿಯಲ್ಲಿ ಜವಾಬ್ದಾರಿಯಾಗುವುದಿಲ್ಲ. ಮಾಹಿತಿಗೆ ಮೊಬೈಲ್ 94498 44252, 94498 41505 ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.

ADVERTISEMENT

ವಿದ್ಯುತ್ ಬಳಸಬೇಡಿ: ತುಮಕೂರು: ನಗರದ ಹನುಮಂತ ಪುರ, ಆದರ್ಶನಗರ, ಬೆಳಗುಂಬ, ಎಂ.ಜಿ.ರಸ್ತೆ, ಬಿ.ಎಚ್.ರಸ್ತೆ, ಶಿರಾಗೇಟ್, ಮಂಡಿಪೇಟೆ, ಅಗ್ರಹಾರ, ರಂಗಾಪುರ, ಲಿಂಗಾಪುರ, ಜೈಪುರ, ಹೊಂಬಯ್ಯನ ಪಾಳ್ಯ, ನರಸಾಪುರ, ಗುರುವಿನಯ್ಯನ ಪಾಳ್ಯ, ದಿಬ್ಬೂರು, ಅಜ್ಜಪ್ಪನ ಹಳ್ಳಿ, ಸ್ಟೇಡಿಯಂ ರಸ್ತೆ, ಎನ್.ಆರ್. ಕಾಲೋನಿ, ತಿಮ್ಮಲಾಪುರ, ಅಣ್ಣೇತೋಟ, ಶಾರದಾದೇವಿ ನಗರ, ಕುಪ್ಪೂರು ವ್ಯಾಪ್ತಿಯ ಗಣೇಶ ಪೆಂಡಾಲ್ಸಂಘಟಕರು ಗಣೇಶ ಹಬ್ಬಕ್ಕೆ ಪೂರ್ವಾನುಮತಿ ಪಡೆಯದೆ ವಿದ್ಯುತ್ ಬಳಕೆ ಮಾಡಬಾರದು ಎಂದು ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಎಚ್.ಸಿ.ಧನ್ಯಕುಮಾರ್ ಸೂಚಿಸಿದ್ದಾರೆ.

ಮಾಹಿತಿಗೆ 94498 44370, 94498 43500, 94498 44394 ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.