
ಪ್ರಜಾವಾಣಿ ವಾರ್ತೆ
ತುಮಕೂರು: ಸ್ವಚ್ಛತೆ ಕಾಪಾಡಲು ಪ್ರತಿಯೊಬ್ಬರು ಜಾಗೃತಿ ವಹಿಸಬೇಕು. ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದಲ್ಲಿ ರೋಗಗಳಿಂದ ಮುಕ್ತಿ ಹೊಂದಬಹುದು ಎಂದು ನಗರದ ಫಿಟ್ನೋಹಿಲಿಕ್ ಜಿಮ್ ಮುಖ್ಯಸ್ಥೆ ಶರ್ಮಿಳಾ ಅಮರ್ ತಿಳಿಸಿದರು.
ಪರಿಸರ ರಕ್ಷಣೆ ಕುರಿತು ಜಿಮ್‌ನ 17 ಸದಸ್ಯರು ಸಿದ್ಧರಬೆಟ್ಟದಲ್ಲಿ ಹಮ್ಮಿಕೊಂಡಿದ್ದ ಸೀಡ್‌ಬಾಲ್ ಅಭಿಯಾನದಲ್ಲಿ ಮಾತನಾಡಿದರು. ಬೇವಿನ ಸಸಿ ಮತ್ತು ಪಪ್ಪಾಯಿ ಸಸಿಗಳ 200ಕ್ಕೂ ಸೀಡ್‌ಬಾಲ್‌ಗಳ ಬೆಟ್ಟಕ್ಕೆ ಎಸೆಯಲಾಯಿತು.
ಸಸಿಗಳನ್ನು ನೆಡುವ ಮೂಲಕ ಆರೋಗ್ಯದ ವಾತಾವರಣ ನಿರ್ಮಿಸಲು ಪ್ರಯತ್ನಿಸಬೇಕು. ಪರಿಸರದ ಬಗ್ಗೆ ಹೆಚ್ಚು ಮೌಲ್ಯವಾದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಪರಿಸರದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಬೇಕು ಎಂದರು. ಜಿಮ್‌ನ ಸದಸ್ಯರು ಪರಿಸರ ಸಂರಕ್ಷಣೆ ಕುರಿತು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.