
ಪ್ರಜಾವಾಣಿ ವಾರ್ತೆ
ರಾಜಣ್ಣ
ತೋವಿನಕೆರೆ (ಕೊರಟಗೆರೆ): ತೋವಿನಕೆರೆ ಪಂಚಾಯಿತಿ ವ್ಯಾಪ್ತಿಯ ಚಿಕ್ಕಣ್ಣನಹಳ್ಳಿ ಗ್ರಾಮದ ರೈತ ರಾಜಣ್ಣ (38) ಹುಣಸೆ ಮರಕ್ಕೆ ನೇಣು ಹಾಕಿಕೊಂಡು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹತ್ತು ದಿನಗಳ ಅಂತರದಲ್ಲಿ ಎರಡು ಕೊಳವೆ ಬಾವಿ ಸೇರಿ ಆರು ವರ್ಷಗಳಲ್ಲಿ ಏಳು ಕೊಳವೆ ಬಾವಿ ಹಾಕಿಸಿದ್ದರು ನೀರು ಬಂದಿರಲಿಲ್ಲ. ಒಂದು ಎಕರೆಯಷ್ಟು ಅಡಿಕೆ ತೋಟ ನೀರು ಇಲ್ಲದೆ ಸಂಪೂರ್ಣ ಒಣಗಿದೆ. ಕೈ ಸಾಲ, ಜಮೀನಿನ ಮೇಲೆ ಸಾಲ, ಖಾಸಗಿ ಬ್ಯಾಂಕ್‌ನಿಂದ ಸಾಲ ಪಡೆದಿದ್ದರು. ಸಾಲ ಕೊಟ್ಟವರು ಕೆಲವು ದಿನಗಳಿಂದ ಹಣಕ್ಕಾಗಿ ಒತ್ತಾಯ ಮಾಡುತ್ತಿದ್ದರು. ಸಾಲಗಾರರ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.