ಕುಣಿಗಲ್: ರಾಗಿ ಖರೀದಿ ಕೇಂದ್ರದ ಪ್ರಾರಂಭದ ದಿನವೇ ತೊಡಕಾಗಿದ್ದು, ರೈತರು ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರ ಸೋಮವಾರ ಕಾರ್ಯಾರಂಭ ಮಾಡಬೇಕಾಗಿತ್ತು. ನೊಂದಣಿಗಾಗಿ ನೂರಾರು ರೈತರು ಗ್ರಾಮೀಣ ಪ್ರದೇಶದಿಂದ ಬಂದಿದ್ದರು. 12 ಗಂಟೆಯಾದರೂ ಬಾಗಿಲು ತೆಗೆಯದ ಕಾರಣ ಅಸಮಾಧಾನಗೊಂಡು ಪ್ರತಿಭಟನೆ ನಡೆಸಿದರು.
ರಾಗಿ ಖರೀದಿಗೆ ಟೋಕನ್ ಪಡೆಯಲು ಗ್ರಾಮೀಣ ಪ್ರದೇಶಗಳಿಂದ ಕೆಲಸಕಾರ್ಯಗಳನ್ನು ಬದಿಗಿಟ್ಟು ಬಂದಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ದೂರಿದರು.
ವ್ಯವಸ್ಥಾಪಕ ಕೃಷ್ಣಪ್ಪ, ತಾಲ್ಲೂಕಿನಲ್ಲಿ 12 ಸಾವಿರ ರೈತರ ರಾಗಿ ಖರೀದಿಗೆ ನೊಂದಾಯಿಸಿಕೊಳ್ಳಲಾಗಿದೆ. ರಾಗಿ ಖರೀದಿಯ ಟೋಕನ್ ನೀಡಬೇಕಾಗಿದ್ದು, ಚೀಲಗಳು ಕಡಿಮೆ ಸರಬರಾಜಾಗಿದೆ. ನಿತ್ಯ 30 ಮಂದಿಗೆ ಟೋಕನ್ ನೀಡಲಾಗುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.