ADVERTISEMENT

ಬೈಲಪ್ಪನ ಮಠದ ಡೇರಿಗೆ ಸಹಾಯಧನ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 14:06 IST
Last Updated 11 ಡಿಸೆಂಬರ್ 2023, 14:06 IST
ಚಿಕ್ಕನಾಯಕನಹಳ್ಳಿ ಬೈಲಪ್ಪನಮಠದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡಕ್ಕೆ ಧರ್ಮಸ್ಥಳ ಯೋಜನೆ ಮಂಜೂರು ಮಾಡಿದ ಅಹಾಯಧನದ ಆದೇಶಪತ್ರವನ್ನು ಯೋಜನಾಧಿಕಾಕರಿ ಎಲ್‌.ಬಿ. ಪ್ರೇಮಾನಂದ್‌ ಸಂಘದ ಅಧ್ಯಕ್ಷ ಉಮೇಶ್‌ ಅವರಿಗೆ ಹಸ್ತಾಂತರಿಸಿದರು.
ಚಿಕ್ಕನಾಯಕನಹಳ್ಳಿ ಬೈಲಪ್ಪನಮಠದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡಕ್ಕೆ ಧರ್ಮಸ್ಥಳ ಯೋಜನೆ ಮಂಜೂರು ಮಾಡಿದ ಅಹಾಯಧನದ ಆದೇಶಪತ್ರವನ್ನು ಯೋಜನಾಧಿಕಾಕರಿ ಎಲ್‌.ಬಿ. ಪ್ರೇಮಾನಂದ್‌ ಸಂಘದ ಅಧ್ಯಕ್ಷ ಉಮೇಶ್‌ ಅವರಿಗೆ ಹಸ್ತಾಂತರಿಸಿದರು.   

ಚಿಕ್ಕನಾಯಕನಹಳ್ಳಿ: ಗುಣಮಟ್ಟದ ಹಾಲು ನೀಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ಎಲ್‌.ಬಿ.ಪ್ರೇಮಾನಂದ ರೈತರಿಗೆ ಮನವಿ ಮಾಡಿದರು.

ಬೈಲಪ್ಪನ ಮಠ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಗ್ರಾಮಾಭಿವೃದ್ಧಿ ಯೋಜನೆಯ ಗ್ರಾಮ ಕಲ್ಯಾಣ ಯೋಜನೆಯಡಿ ಮಂಜೂರಾದ ₹1.5 ಲಕ್ಷದ ಆದೇಶ ಪತ್ರವನ್ನು ಸಂಘದ ಅಧ್ಯಕ್ಷ ಉಮೇಶ್ ಅವರಿಗೆ ಹಸ್ತಾಂತರಿಸಿ ಮಾತನಾಡಿದರು.

ಯೋಜನೆ ಮೇಲ್ವಿಚಾರಕ ಭಾಸ್ಕರ್, ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಸೇವಾಪ್ರತಿನಿಧಿ ಭಾರತಿ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.