ADVERTISEMENT

ಮತ್ತೆ ನಾಲ್ಕು ಮಂದಿ ಮರಣ

ಶುಕ್ರವಾರ 92 ಮಂದಿಗೆ ಕೊರೊನಾ ಸೋಂಕು ದೃಢ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 16:08 IST
Last Updated 14 ಆಗಸ್ಟ್ 2020, 16:08 IST

ತುಮಕೂರು: ಕೊರೊನಾ ಸೋಂಕಿನಿಂದ ಮತ್ತೆ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 96ಕ್ಕೆ ತಲುಪಿದೆ. ಶುಕ್ರವಾರ ಮತ್ತೆ 92 ಮಂದಿಗೆ ಸೋಂಕು ದೃಢವಾಗಿದೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ 3,211 ಮಂದಿಗೆ ಸೋಂಕು ತಗುಲಿದೆ. ಇವರಲ್ಲಿ 2,075 ಮಂದಿ ಗುಣಮುಖರಾದರೆ 1,040 ಸಕ್ರಿಯ ಪ್ರಕರಣಗಳು ಇವೆ.

ಪಾವಗಡ ತಾಲ್ಲೂಕು ವೈ.ಎನ್.ಹೊಸಕೋಟೆ 64 ವರ್ಷ ಮಹಿಳೆ, ಕುಣಿಗಲ್ ತಾಲ್ಲೂಕು ಹೊಸಪಾಳ್ಯದ 67 ವರ್ಷದ ಪುರುಷ, ತುಮಕೂರು ಎಸ್‌.ಎಸ್.ಪುರಂ 52 ವರ್ಷದ ಪುರುಷ, ತಿಪಟೂರು ನಗರದ ಗೋವಿಂದಪುರ ಬಡಾವಣೆ 55 ವರ್ಷದ ಪುರುಷ ಮೃತಪಟ್ಟಿದ್ದಾರೆ.

ಶುಕ್ರವಾರ ಪತ್ತೆಯಾದ ಸೋಂಕಿತರಲ್ಲಿ ಮೂವರು ಮಕ್ಕಳು, 57 ಪುರುಷರು, 35 ಮಹಿಳೆಯರು ಇದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.