ತುಮಕೂರು: ಫ್ರೆಂಡ್ಸ್ ವೆಲ್‌ಫೇರ್ ಸಂಸ್ಥೆಯಿಂದ ಬೆಂಗಳೂರಿನ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೇ 19ರಿಂದ 10 ದಿನ ಸುಟ್ಟ ಗಾಯಗಳಿಗೆ ಉಚಿತವಾಗಿ ಪ್ಲಾಸ್ಟಿಕ್ ಸರ್ಜರಿ ನಡೆಸುವ ಶಿಬಿರ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಪಾಯಲ್ ಇಲ್ಲಿ ಮಂಗಳವಾರ ಹೇಳಿದರು.
ಅಪಘಾತ, ಆ್ಯಸಿಡ್ ದಾಳಿ, ವಿವಿಧ ಅವಘಡಗಳಿಂದ ಗಾಯ ಮಾಡಿಕೊಂಡವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. 30 ವರ್ಷಗಳಿಂದ ಪ್ಲಾಸ್ಟಿಕ್ ಸರ್ಜರಿ ಶಿಬಿರ ಆಯೋಜಿಸಲಾಗುತ್ತಿದೆ. ಇದುವರೆಗೆ 4,500ಕ್ಕೂ ಹೆಚ್ಚು ಬಡ ಜನರಿಗೆ ಅನುಕೂಲವಾಗಿದೆ. ಅಮೆರಿಕದ ತಜ್ಞ ವೈದ್ಯರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯ ರೋಗಿಗಳಿಗೆ ನಗರದ ಸರ್ವೋದಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೇ 16ರಂದು ಶಸ್ತ್ರಚಿಕಿತ್ಸಾ ಪೂರ್ವ ಪರೀಕ್ಷೆ ನಡೆಸಲಾಗುವುದು. ಅಗತ್ಯ ಸಂದರ್ಭದಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುವುದು. ಮಾಹಿತಿಗೆ ಸಂಸ್ಥೆಯ ಮೊ 9880307780 ಸಂಪರ್ಕಿಸಬಹುದು ಎಂದರು.
ಫ್ರೆಂಡ್ಸ್ ವೆಲ್‌ಫೇರ್ ಸಂಸ್ಥೆಯ ಮಹೇಂದ್ರ ಜೈನ್, ಮಾರುತಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.