ADVERTISEMENT

ಶಾಸಕ ಡಾ.ಜಿ.ಪರಮೇಶ್ವರ ಎದುರು ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 7:56 IST
Last Updated 16 ಏಪ್ರಿಲ್ 2020, 7:56 IST

ತುಮಕೂರು: ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ ಸಮ್ಮುಖದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

ಕೊರೊನಾ ವೈರಸ್ ಹಿನ್ನಲೆ ಕ್ಷೇತ್ರ ಪ್ರವಾಸ ಕೈಗೊಂಡಿದ್ದ ಶಾಸಕರು ಕೆಸ್ತೂರು ಗ್ರಾಮದಲ್ಲಿ ಜನಸಾಮಾನ್ಯರ ಸಮಸ್ಯೆ ಆಲಿಸುವ ವೇಳೆ, ಕೆಸ್ತೂರು ಗ್ರಾಮಪಂಚಾಯ್ತಿಯಲ್ಲಿ ಕಾಮಗಾರಿಗಳು ನಡೆಯುತ್ತಿಲ್ಲ ಈ ಬಗ್ಗೆ ಗಮನ ಹರಿಸಿ ಎಂದು ಬಿಜೆಪಿ ಕಾರ್ಯಕರ್ತ ರವಿ ಶಾಸಕರಿಗೆ ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡ ನರಸಿಂಹಮೂರ್ತಿ ಮದ್ಯಪ್ರವೇಶಿಸಿ ಶಾಸಕರು ನಮ್ಮ ಗ್ರಾಮಕ್ಕೆ ಬಂದಾಗಲೆಲ್ಲಾ ತಕರಾರು ಮಾಡುತ್ತೀಯ, ನಿಮ್ಮ ಬಿಜೆಪಿ ಸಂಸದರು ನಮ್ಮ ಗ್ರಾಮಕ್ಕೆ ಎಷ್ಟು ಸಾರಿ ಬಂದಿದ್ದಾರೆ, ಕೊರೊನಾ ವೈರಸ್ ಬಂದು ಜನ ಸಂಕಷ್ಟದಲ್ಲಿರುವುದು ಅವರ ಗಮನಕ್ಕೆ ಬಂದಿಲ್ಲವೇ? ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆಗ ಗ್ರಾಮದ ಇತರೆ ಕಾಂಗ್ರೆಸ್ ಮುಖಂಡರು ಸಂಸದರು ಬಂದು ಜನರ ಕಷ್ಟ ಆಲಿಸುವಂತೆ ಒತ್ತಾಯಿಸಿದರು.

ADVERTISEMENT

ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಶಾಸಕ ಡಾ.ಜಿ.ಪರಮೇಶ್ವರ್ ಕಾರು ಹತ್ತಿ ತೆರಳಿದರು. ಘಟನೆ ನಡೆಯುವಾಗ ಪೊಲೀಸರು ಮೂಕ ವಿಸ್ಮಿತರಾಗಿ ನಿಂತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.