ADVERTISEMENT

ಎಗ್ಗಿಲ್ಲದೆ ನಡೆದಿದೆ ಜೂಜಾಟ: ಹರಿದಾಡಿದ ವಿಡಿಯೊ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2020, 12:24 IST
Last Updated 21 ಏಪ್ರಿಲ್ 2020, 12:24 IST
ಲಾಕ್‌ಡೌನ್ ನಡುವೆ ರಾಜಾರೋಷವಾಗಿ ನಡೆಯುತ್ತಿರುವ ಜೂಜಾಟದ ವಿಡಿಯೊ ವೈರಲ್ ಆಗಿದೆ
ಲಾಕ್‌ಡೌನ್ ನಡುವೆ ರಾಜಾರೋಷವಾಗಿ ನಡೆಯುತ್ತಿರುವ ಜೂಜಾಟದ ವಿಡಿಯೊ ವೈರಲ್ ಆಗಿದೆ   

ಕೋರ: ಲಾಕ್‌ಡೌನ್ ನಡುವೆಯೂ ಹೋಬಳಿಯ ಬಹುತೇಕ ಭಾಗಗಳಲ್ಲಿ ಜೂಜಾಟ ಎಗ್ಗಿಲ್ಲದೆ ನಡೆಯುತ್ತಿದೆ.

ಬೆಳಧರ, ಚಿಕ್ಕತೊಟ್ಲುಕೆರೆ, ದೇವಲಾಪುರ, ಮಾವುಕೆರೆ, ಕೆಸ್ತೂರು, ಅಮೃತಗಿರಿ ಗ್ರಾಮಗಳ ತೋಟ, ಹಳ್ಳದಸಾಲು ಮನೆಗಳಲ್ಲಿ ಜೂಜಾಟ ರಾಜಾರೋಷವಾಗಿ ನಡೆಯುತ್ತಿದ್ದು, ದಂಧೆಗೆ ಕಡಿವಾಣ ಹಾಕುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಚಿಕ್ಕತೊಟ್ಲುಕೆರೆ ಭಾಗದಲ್ಲಿ ಯುವಕರು ಜೂಜಾಡುತ್ತಿರುವ ವಿಡಿಡಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.