ADVERTISEMENT

ಗರಡಿ ಮನೆಗಳ ಪುನರುಜ್ಜೀವನ ಅಗತ್ಯ: ಡಿ.ಆರ್.ಚೇತನ್

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2024, 14:09 IST
Last Updated 12 ಸೆಪ್ಟೆಂಬರ್ 2024, 14:09 IST
ತೋವಿನಕೆರೆ ಸಮೀಪದ ಕೆಸ್ತೂರಿನಲ್ಲಿ ತರಬೇತಿದಾರ ಡಿ.ಆರ್. ಚೇತನ ಗರಡಿ ಮನೆಯ ಉಪಕರಣಗಳ ಬಳಕೆ ಮತ್ತು ಉಪಯೋಗದ ಬಗ್ಗೆ ಮಾಹಿತಿ ನೀಡಿದರು
ತೋವಿನಕೆರೆ ಸಮೀಪದ ಕೆಸ್ತೂರಿನಲ್ಲಿ ತರಬೇತಿದಾರ ಡಿ.ಆರ್. ಚೇತನ ಗರಡಿ ಮನೆಯ ಉಪಕರಣಗಳ ಬಳಕೆ ಮತ್ತು ಉಪಯೋಗದ ಬಗ್ಗೆ ಮಾಹಿತಿ ನೀಡಿದರು   

ತೋವಿನಕೆರೆ: ಅಧುನಿಕ ಜೀವನ ಶೈಲಿಯಿಂದ ದೇಹ ಮತ್ತು ಮನಸ್ಸಿನ ನೆಮ್ಮದಿಗೆ ಭಂಗ ಬರುತ್ತಿದ್ದು, ಅನಿವಾರ್ಯವಾಗಿ ಪುರಾತನ ಗರಡಿ ಮನೆಯಂತಹ ಸಂಸ್ಕೃತಿಗೆ ಹಿಂದಿರುಗಬೇಕಿದೆ ಎಂದು ತರಬೇತುದಾರ ಡಿ.ಆರ್.ಚೇತನ್ ಅಭಿಪ್ರಾಯಪಟ್ಟರು.

ಸಮೀಪದ ಕೆಸ್ತೂರು ಗ್ರಾಮದ ನೇತಾಜಿ ಬ್ರಿಗೇಡ್‌ನವರು ಗಣಪತಿ ಪೆಂಡಾಲ್‌ನಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಗರಡಿ ಮನೆಗಳ ಉಪಕರಣಗಳ ಉಪಯೋಗ ಮಾಡುವ ಬಗ್ಗೆ ಮಾಹಿತಿ ನೀಡಿದರು.

ಗರಡಿ ಮನೆಗಳಲ್ಲಿ ಮಾಡುವ ಕಸರತ್ತುಗಳಿಂದ ನಮ್ಮ ದೇಹವನ್ನು ಉಹೆಗೂ ಮೀರಿ ಸದೃಢಗೊಳಿಸಿಕೊಂಡು ಆರೋಗ್ಯವಂತರಾಗಿ ಬದುಕಬಹುದು.
ಈಗಲೂ ಬ್ರಿಟಿಷರು ಗರಡಿ ಮನೆಯ ಕಸರತ್ತನ್ನು ಅವರ ಸೈನಿಕರಿಗೆ ತರಬೇತಿ ನೀಡುತ್ತಿದ್ದಾರೆ ಎಂದು ವಿವರಿಸಿದರು.

ADVERTISEMENT

ಹಳ್ಳಿಸಿರಿ ಮಂಜಮ್ಮ ಹಲಸಿನ ಕಾಯಿ ಮತ್ತು ಹಣ್ಣಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.