ಪಾವಗಡ: ತಾಲ್ಲೂಕಿನ ತಿಮ್ಮಮ್ಮನಹಳ್ಳಿಯಲ್ಲಿ ಚಿನ್ನದ ಸರ ಪಾಲಿಶ್ ಮಾಡುವ ನೆಪದಲ್ಲಿ ಆ್ಯಸಿಡ್‌ನಲ್ಲಿ ಚಿನ್ನ ಕರಗಿಸಿ ಮಾರಾಟ ಮಾಡುತ್ತಿದ್ದ ಕಳ್ಳರ ಗುಂಪನ್ನು ತಿರುಮಣಿ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ರಾಜ್ಯದ ಸುನಿಲ್(26), ಕನ್ನಯ್ಯ ಕುಮಾರ್(28) ಮತ್ತೊಬ್ಬರ ವಿವರ ತಿಳಿದು ಬಂದಿಲ್ಲ.
ನಾಗಲಮಡಿಕೆ ಹೋಬಳಿ ತಿಮ್ಮಮ್ಮನಹಳ್ಳಿ ಗ್ರಾಮದ ಮನೆ, ಮನೆಗೆ ಹೋಗಿ ಚಿನ್ನ, ಬೆಳ್ಳಿ ಆಭರಣಗಳಿಗೆ ಪಾಲಿಶ್ ಹಾಕಿ ಕೊಡುವುದಾಗಿ ಕಳ್ಳರು ತಿಳಿಸಿದ್ದಾರೆ. ಮಹಿಳೆಯೊಬ್ಬರಿಂದ ಚಿನ್ನದ ಸರ ಪಡೆದು ಆ್ಯಸಿಡ್‌ನಲ್ಲಿ ಮುಳುಗಿಸಿ ಮತ್ತೆ ಅದನ್ನು ಪೇಪರ್‌ನಲ್ಲಿ ಸುತ್ತಿ ಕೊಟ್ಟಿದ್ದಾರೆ. ಒಂದು ಗಂಟೆಯವರೆಗೆ ಚಿನ್ನದ ಸರವನ್ನು ಪೇಪರ್‌ನಿಂದ ಹೊರತೆಗೆಯಬಾರದು. ತೆಗೆದಲ್ಲಿ ಹೊಳಪು ಬರುವುದಿಲ್ಲ ಎಂದು ತಿಳಿಸಿ ಹೊರ ನಡೆದಿದ್ದಾರೆ.
ಮಹಿಳೆ ಪೇಪರ್ ತೆಗೆದು ನೊಡಿದಾಗ ಚಿನ್ನದ ಸರದ ತೂಕ ಕಡಿಮೆಯಾಗಿದೆ ಅನುಮಾನದಿಂದ ಚೀರಾಡಿದ್ದಾರೆ. ಗಾಬರಿಗೊಂಡ ಕಳ್ಳರು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಲು ಯತ್ನಿಸಿದಾಗ ಭತ್ತ ಕೊಯ್ಲು ಮಾಡುವ ವಾಹನಕ್ಕೆ ಡಿಕ್ಕಿಯಾಗಿ ಬಿದ್ದು ಗಾಯಗೊಂಡಿದ್ದಾರೆ.
ಸ್ಥಳಕ್ಕೆ ಬಂದ ತಿರುಮಣಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.