ADVERTISEMENT

ಎಡೆಯೂರು ದೇವಸ್ಥಾನಕ್ಕೆ19 ಕೆ.ಜಿ ಚಿನ್ನದ ರಥ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 20:12 IST
Last Updated 4 ಜೂನ್ 2020, 20:12 IST
ಕುಣಿಗಲ್ ತಾಲ್ಲೂಕು ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ದೇವಾಲಯಕ್ಕೆ ಚಿನ್ನದ ರಥ ಸಮರ್ಪಣೆ ಮಾಡಿದ ಶಿವಣ್ಣ, ರುದ್ರಾಣಮ್ಮ ದಂಪತಿ
ಕುಣಿಗಲ್ ತಾಲ್ಲೂಕು ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ದೇವಾಲಯಕ್ಕೆ ಚಿನ್ನದ ರಥ ಸಮರ್ಪಣೆ ಮಾಡಿದ ಶಿವಣ್ಣ, ರುದ್ರಾಣಮ್ಮ ದಂಪತಿ   

ಕುಣಿಗಲ್: ಕರೊನಾ ಲಾಕ್‌ಡೌನ್ ಕಾರಣ ದೇವಾಲಯಗಳಿಗೆ ಪ್ರವೇಶವೇ ಇಲ್ಲದ ದಿನಗಳಲ್ಲಿ ಭಕ್ತರೊಬ್ಬರು 19 ಕೆ.ಜಿ ತೂಕದ ಸುಮಾರು ₹9 ಕೋಟಿ ಮೌಲ್ಯದ ಚಿನ್ನದ ರಥವನ್ನು ಎಡೆಯೂರು ಸಿದ್ಧಲಿಂಗೇಶ್ವರ ದೇವಾಲಯಕ್ಕೆ ಸಮರ್ಪಿಸಿದ್ದಾರೆ.

ಕುಣಿಗಲ್ ತಾಲ್ಲೂಕಿನತೇವಡನಹಳ್ಳಿ ಶಿವಣ್ಣ ಅವರು ಚಿನ್ನದ ರಥ ಸಮರ್ಪಿಸಿದವರು. ಬೆಂಗಳೂರಿನಲ್ಲಿ ನೆಲೆಸಿ ಬಸ್ ಕಂಡಕ್ಟರ್ ಆಗಿದ್ದು, ನಂತರ ಗುತ್ತಿಗೆದಾರರಾಗಿ ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದಾರೆ. ಬುಧವಾರ ನಡೆದ ಸರಳ ಸಮಾರಂಭದಲ್ಲಿ ಬಾಳೆಹೊನ್ನೂರು ಶಾಖಾ ಮಠದ ರೇಣುಕಾಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶಿವಣ್ಣ, ರುದ್ರಾಣಮ್ಮ ದಂಪತಿ ಚಿನ್ನದ ರಥವನ್ನು ದೇಗುಲಕ್ಕೆ ಸಮರ್ಪಿಸಿದ್ದಾರೆ.

‘ಸಿದ್ಧಲಿಂಗೇಶ್ವರರಿಂದ ಬಂದದ್ದನ್ನು ಅವರಿಗೇ ಸಮರ್ಪಣೆ ಮಾಡಿ ದೇವಾಲಯಕ್ಕೆ ಹರಕೆ ರೂಪದಲ್ಲಿ ರಥ ಸಮರ್ಪಿಸಿದ್ದೇನೆ’ ಎನ್ನುತ್ತಾರೆ ಶಿವಣ್ಣ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.