ತೋವಿನಕೆರೆ: ಬಿಸಾಡಿಹಳ್ಳಿ ಗೊಲ್ಲರಹಟ್ಟಿಗೆ ಇದೇ ಮೊದಲ ಬಾರಿಗೆ ಸರ್ಕಾರಿ ಬಸ್ ಬಂದಿದ್ದು, ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರು ತೋವಿನಕೆರೆ ಪಂಚಾಯಿತಿಯ ಬಿಸಾಡಿಹಳ್ಳಿ ಗೊಲ್ಲರಹಟ್ಟಿಯನ್ನು ದತ್ತು ತೆಗೆದುಕೊಂಡಿದ್ದು ಅವರ ಸೂಚನೆಯಂತೆ ಅಭಿವೃದ್ಧಿ ಕೆಲಸಗಳ ಭರದಿಂದ ನಡೆಯುತ್ತಿವೆ.
ಗ್ರಾಮದ ವಿದ್ಯಾರ್ಥಿಗಳು ಬಸ್ ಕೊರತೆಯಿಂದಾಗಿ ಶಿಕ್ಷಣದಿಂದ ವಂಚಿತರಾಗುತ್ತಿರುವ ಬಗ್ಗೆ ಮಾಹಿತಿ ತಿಳಿದ ನಾಗಲಕ್ಷ್ಮಿ ಅವರು, 30 ದಿನದೊಳಗೆ ಗ್ರಾಮಕ್ಕೆ ಸರ್ಕಾರಿ ಬಸ್ ವ್ಯವಸ್ಥೆ ಮಾಡಿಸಲಾಗುವುದು. ಹಟ್ಟಿಯ ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರೆಸಬೇಕು ಎಂದು ವಾಗ್ದಾನ ಪಡೆದಿದ್ದರು. ಅದರಂತೆ ಗೊಲ್ಲರಹಟ್ಟಿಗೆ ಸರ್ಕಾರಿ ಬಸ್ ವ್ಯವಸ್ಥೆ ಮಾಡಿದ್ದಾರೆ.
ಗ್ರಾಮಕ್ಕೆ ಮೊದಲ ಬಾರಿ ಬಸ್ ಬಂದದನ್ನು ಕಂಡ ಗ್ರಾಮಸ್ಥರು, ವಿದ್ಯಾರ್ಥಿಗಳು ಅತೀವ ಸಂತಸಪಟ್ಟರು. ಗ್ರಾಮದ ಯುವಕರು ಈ ಬಸ್‌ಗೆ ‘ನಾಗಕ್ಕನ ಬಸ್’ ಎಂದು ಹೆಸರಿಟ್ಟು ಕರೆಯುತ್ತಿದ್ದಾರೆ. ಬಸ್ ಕಂಡು ‘ನಾಗಕ್ಕನ ಬಸ್‌ಗೆ ಜೈ’ ಎಂದು ಘೋಷಣೆ ಕೂಗಿದರು.
ಹೋಬಳಿ ವ್ಯಾಪ್ತಿಯಲ್ಲಿಯೇ ಒಂದು ಗೊಲ್ಲರಹಟ್ಟಿಗೆ ಸೀಮಿತವಾಗಿ ಸಂಚರಿಸುತ್ತಿರುವ ಮೊದಲ ಬಸ್ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.