ADVERTISEMENT

ವಿಜೃಂಭಣೆಯಿಂದ ನಡೆದ ಗೊರವನಹಳ್ಳಿ ಲಕ್ಷದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 3:01 IST
Last Updated 4 ಡಿಸೆಂಬರ್ 2021, 3:01 IST
ಕೊರಟಗೆರೆ ತಾಲ್ಲೂಕಿನ ಗೊರವನಹಳ್ಳಿ ಲಕ್ಷ್ಮಿ ದೇವಾಲಯದಲ್ಲಿ ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಶಾಸಕ ಡಾ. ಜಿ. ಪರಮೇಶ್ವರ, ವೀಭದ್ರಶಿವಾಚಾರ್ಯ ಸ್ವಾಮೀಜಿ, ಡಾ. ಹನುಮಂತನಾಥ ಸ್ವಾಮೀಜಿ ಉದ್ಘಾಟಿಸಿದರು. ಪ್ರಧಾನ ಅರ್ಚಕ ಪ್ರಸನ್ನಕುಮಾರ್ ಇದ್ದರು.  
ಕೊರಟಗೆರೆ ತಾಲ್ಲೂಕಿನ ಗೊರವನಹಳ್ಳಿ ಲಕ್ಷ್ಮಿ ದೇವಾಲಯದಲ್ಲಿ ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಶಾಸಕ ಡಾ. ಜಿ. ಪರಮೇಶ್ವರ, ವೀಭದ್ರಶಿವಾಚಾರ್ಯ ಸ್ವಾಮೀಜಿ, ಡಾ. ಹನುಮಂತನಾಥ ಸ್ವಾಮೀಜಿ ಉದ್ಘಾಟಿಸಿದರು. ಪ್ರಧಾನ ಅರ್ಚಕ ಪ್ರಸನ್ನಕುಮಾರ್ ಇದ್ದರು.     

ಕೊರಟಗೆರೆ: ತಾಲ್ಲೂಕಿನ ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯದಲ್ಲಿ ಬಹಳ ವರ್ಷಗಳ ನಂತರ ಕಾರ್ತಿಕ ಮಾಸದ ಅಂಗವಾಗಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ಕೊವಿಡ್ ಹಾಗೂ ಇನ್ನತರೆ ಕಾರಣಗಳಿಂದ ಸ್ಥಗಿತವಾಗಿದ್ದ ಬ್ರಹ್ಮರಥೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಲಕ್ಷ ದೀಪೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. ಟ್ರಸ್ಟ್ ಅಧ್ಯಕ್ಷ ವಾಸುದೇವ್ ಹಾಗೂ ಧರ್ಮ ದರ್ಶಿಗಳು ರಥೋತ್ಸವಕ್ಕೆ ಮಧ್ಯಾಹ್ನ ಚಾಲನೆ ನೀಡಿದರು. ಇದರ ಅಂಗವಾಗಿ ವಿವಿಧ ಹೋಮ, ಹವನ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಸಲಾಯಿತು.

ಶುಕ್ರವಾರ ಸಂಜೆ ನಡೆದ ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಶಾಸಕ ಡಾ. ಜಿ. ಪರಮೇಶ್ವರ, ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಎಲೆರಾಂಪುರ ಮಠದ ಡಾ. ಹನುಮಂತನಾಥ ಸ್ವಾಮೀಜಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿ ಪರಮೇಶ್ವರ್ `ಈ ಹಿಂದೆ ದೇವಾಲಯದಲ್ಲಿ ಇದ್ದ ಘತ ವೈಭವ ಮರುಕಳಿಸಿದೆ. ಇದಕ್ಕೆ ಯಾವುದೇ ವಿಘ್ನ ಭಾರದಂತೆ ದೇವಾಲಯದಲ್ಲಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಕ್ರಮಗಳು ಈ ಹಿಂದಿನಂತೆ ಮುಂದುವರೆಸಿಕೊಂಡು ಹೋಗುವಂತೆ ದೇವಾಲಯದ ಆಡಳಿತ ಮಂಡಳಿಗೆ ಸೂಚಿಸಿದರು. ಇದಕ್ಕೆ ಯಾವಾಗಲೂ ನನ್ನ ಸಹಕಾರ ಇರುವುದಾಗಿ' ತಿಳಿಸಿದರು.
ಟ್ರಸ್ಟ್ ನಲ್ಲಿ ಈ ಹಿಂದೆ ಉಂಟಾದ ಗೊಂದಲಗಳಿಂದಾಗಿ ದೇವಾಲಯದ ಆಡಳಿತವನ್ನು ತಾತ್ಕಾಲಿಕವಾಗಿ ಸರ್ಕಾರ ವಹಿಸಿಕೊಂಡು ಮಧುಗಿರಿ ಉಪವಿಭಾಗಾಧಿಕಾರಿಯನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿತ್ತು. ಅದಾದ ಬಳಿಕ ಕಳೆದ ಆರೇಳು ವರ್ಷಗಳಿಂದ ದೇವಾಲಯದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ನಿಲ್ಲಿಸಲಾಗಿತ್ತು. ಈಗ ಮತ್ತೆ ಆಡಳಿತವನ್ನು ನ್ಯಾಯಾಲಯದ ತೀರ್ಪಿನ ಮೇರೆಗೆ ಟ್ರಸ್ಟ್ ವಹಿಸಿಕೊಂಡಿದೆ. ಟ್ರಸ್ಟ್ ಆಡಳಿತ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಈ ಹಿಂದಿನಂತೆ ಎಲ್ಲಾ ಧಾರ್ಮಿಕ ಕಾರ್ಯಗಳನ್ನು ಪುನಾರಂಭ ಮಾಡಲಾಯಿತು. ಕಾರ್ತಿಕ ಮಾಸದ ಕೊನೆ ಶುಕ್ರವಾರ ಬ್ರಹ್ಮರಥೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ, ಆರತಿ ಉತ್ಸವ, ಲಕ್ಷದೀಪೋತ್ಸವ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ವಿವಿದೆಡೆಗಳಿಂದ ಬಂದ ನೂರಾರು ಭಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಬಿ.ಜಿ.ವಾಸುದೇವ, ಕಾರ್ಯದರ್ಶಿ ಚಿಕ್ಕನರಸಯ್ಯ, ಖಜಾಂಚಿ ಮಂಜುನಾಥ, ಧರ್ಮದರ್ಶಿಗಳಾದ ಡಾ. ಟಿ.ಎಸ್.ಲಕ್ಷ್ಮಿಕಾಂತ, ಟಿ.ಆರ್.ನಟರಾಜು, ಶ್ರೀಪ್ರಸಾದ್, ರವಿರಾಜ ಅರಸ್, ನರಸರಾಜು, ಮುರಳೀಕೃಷ್ಣ, ಓಂಕಾರೇಶ್, ಆರ್.ಜಗದೀಶ್, ರಾಮಲಿಂಗಯ್ಯ, ಲಕ್ಷ್ಮಿನರಸಯ್ಯ, ನಾಗರಾಜು, ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ, ಸಿಬ್ಬಂಧಿಗಳಾದ ಲಕ್ಷ್ಮಣ್, ಅಶ್ವತ್ಥ್, ರಾಮಮೂರ್ತಿ, ರಾಧಾಕೃಷ್ಣ, ಸತೀಶ್, ರಂಗಶಾಮಯ್ಯ ಇತರರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.