ಗುಬ್ಬಿ: ಪಟ್ಟಣದ ಹೃದಯ ಭಾಗದಲ್ಲಿ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಬಸ್ ನಿಲ್ದಾಣದಲ್ಲಿ ಮಳೆ ಬಂದರೆ ಹೊರಗಿನ ನೀರು ಬಸ್ ನಿಲ್ದಾಣಕ್ಕೆ ಹರಿದುಬಂದು ನಿಲ್ಲುತ್ತದೆ. ನಿಲ್ದಾಣದಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಿಲ್ಲದ್ದರಿಂದ ಪ್ರಯಾಣಿಕರು ತಿರುಗಾಡಲು ಪ್ರಯಾಸ ಪಡುವಂತಾಗಿದೆ.
ಮಳೆ ನೀರಿನ ಜೊತೆಗೆ ಕಸ, ಕೊಳೆತ ತರಕಾರಿ ಹರಿದು ಬರುತ್ತದೆ. ಪ್ರಯಾಣಿಕರು ನೆಮ್ಮದಿಯಿಂದ ಇಳಿದು ಹತ್ತಬೇಕಾಗಿರುವ ಬಸ್ ನಿಲ್ದಾಣ ಸಮಸ್ಯೆಗಳ ಆಗರವಾಗಿದೆ.
ಬಸ್ ನಿಲ್ದಾಣದ ಪಕ್ಕದ ಸಂತೆ ಮೈದಾನಕ್ಕೆ ಹೋಗುವ ರಸ್ತೆಯಲ್ಲಿ ನೀರು ಸರಾಗವಾಗಿ ಹರಿಯದೆ ಇರುವುದರಿಂದ ಕಸ ಕಡ್ಡಿಗಳು ಬಸ್ ನಿಲ್ದಾಣದ ಒಳಗೆ ಬಂದು ನಿಲ್ಲುವಂತಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಬಸ್ ನಿಲ್ದಾಣದ ಅವ್ಯವಸ್ಥೆ ಗೊತ್ತಿದ್ದರೂ ಗಮನ ಹರಿಸದೆ ಇರುವುದು ಬೇಸರದ ಸಂಗತಿ ಎಂದು ಪ್ರಯಾಣಿಕರು ಆರೋಪಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.