ತೋವಿನಕೆರೆ: ಸೆಪ್ಟೆಂಬರ್ 22ರಿಂದ ಪ್ರಾರಂಭವಾಗುವ ಜನಗಣತಿಯಲ್ಲಿ ಹಳ್ಳಿಕಾರ ಎಂದು ಬರೆಸಿ ಯಾವುದೇ ಕಾರಣದಿಂದ ಹಿಂದೆ ಮುಂದೆ ಕುಲ, ಜಾತಿಗಳನ್ನು ಸೇರಿಸಬೇಡಿ ಎಂದು ರಾಜ್ಯ ಹಳ್ಳಿಕಾರ ಜನಾಂಗದ ಉಪಾಧ್ಯಕ್ಷ ಕೆ.ಎಂ.ನಾಗರಾಜು ಮನವಿ ಮಾಡಿದರು.
ತೋವಿನಕೆರೆಯಲ್ಲಿ ಹಳ್ಳಿಕಾರ ಸಂಘ ಹಾಗೂ ಆರ್‌ಎಂಆರ್ ಹಳ್ಳಿಕಾರ ಫೌಂಡೇಶನ್ ಟ್ರಸ್ಟ್ ವತಿಯಿಂದ ಜನಗಣತಿಯಲ್ಲಿ ಜನಾಂಗದವರು ವಹಿಸಬೇಕಾದ ಎಚ್ಚರಿಕೆ ಬಗ್ಗೆ ಮಾತನಾಡಿದರು
ಜನಗಣತಿ ಮಾಡುವರು ಬಂದಾಗ ಕೇಳುವ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಸತ್ಯವಾದ ಮಾಹಿತಿ ನೀಡಿ. ದಾಖಲಾದ ಮಾಹಿತಿಯನ್ನು ತಕ್ಷಣ ಪರಿಶೀಲಿಸಿ. ಜನಾಂಗದ ಹಿಂದುಳಿದಿರುವ ಪರಿಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರುವ ಅನಿವಾರ್ಯ ನಮಗೆ ಇದೆ. ನಮ್ಮ ಬದುಕಿನ ಪರಿಸ್ಥಿತಿ ಸರ್ಕಾರದ ಗಮನಕ್ಕೆ ತಂದು ಪ್ರವರ್ಗ 1ಕ್ಕೆ ಸೇರಿಸುವಂತೆ ಒತ್ತಡ ಹಾಕಬೇಕಾಗಿದೆ. ಸ್ಥಳೀಯ ಮುಖಂಡರು ಪ್ರತಿ ಹಂತದಲ್ಲೂ ಎಚ್ಚರಿಕೆ ವಹಿಸಲು ತಿಳಿಸಿದರು.
ಕಾರ್ಯದರ್ಶಿ ಟಿ.ಶ್ರೀನಿವಾಸ ಮೂರ್ತಿ, ಮಹಾಲಿಂಗಯ್ಯ ಮಾತನಾಡಿದರು. ಸತೀಶ್, ಬಾಬು, ಶಬರಿಮಲೈ ನಾರಾಯಣಪ್ಪ, ಟಿ.ಎಲ್.ವರದರಾಜು, ಶಾಲಾಭಿವೃದ್ಧಿ ಅಧ್ಯಕ್ಷ ಮಂಜಣ್ಣ, ಸೋಮಶೇಖರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.