ADVERTISEMENT

ಪಾವಗಡ: ಮಳೆಯಿಂದಾಗಿ ಕಟಾವು ಮಾಡಿದ ಶೇಂಗಾ ಹಾನಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2020, 6:11 IST
Last Updated 2 ಸೆಪ್ಟೆಂಬರ್ 2020, 6:11 IST
ಪಾವಗಡ ತಾಲ್ಲೂಕು ಬಿ.ಕೆ.ಹಳ್ಳಿ ಮಾರಪ್ಪ ಅವರ ಜಮೀನಿನ ಬಳಿ ಕಟಾವು ಮಾಡಿ ಬಣವೆಗೆ ಹಾಕಿದ್ದ ಶೇಂಗಾ ಮಂಗಳವಾರ ಬಿದ್ದ ಮಳೆಯಿಂದ ಹಾಳಾಗಿದೆ
ಪಾವಗಡ ತಾಲ್ಲೂಕು ಬಿ.ಕೆ.ಹಳ್ಳಿ ಮಾರಪ್ಪ ಅವರ ಜಮೀನಿನ ಬಳಿ ಕಟಾವು ಮಾಡಿ ಬಣವೆಗೆ ಹಾಕಿದ್ದ ಶೇಂಗಾ ಮಂಗಳವಾರ ಬಿದ್ದ ಮಳೆಯಿಂದ ಹಾಳಾಗಿದೆ   

ಪಾವಗಡ: ತಾಲ್ಲೂಕಿನ ಹಲವೆಡೆ ಮಂಗಳವಾರ ಮಳೆಯಾಗಿದೆ.ತಡವಾಗಿ ಶೆಂಗಾ ಬಿತ್ತನೆ ಮಾಡಿದ್ದ ರೈತರಿಗೆ ಮಳೆಯಿಂದ ಅನುಕೂಲವಾಗಿದೆ. ಆದರೆ ಶೀಘ್ರ ಬಿತ್ತನೆ ಮಾಡಿ ಕಟಾವು ಮಾಡಿದ್ದ ರೈತರಿಗೆ ಮಳೆಯಿಂದ ಬೆಳೆ ಹಾನಿಯಾಗಿದೆ.

ಜಮೀನಿನಲ್ಲಿಯೆ ಬಿಟ್ಟಿದ್ದ ಶೇಂಗಾ ಮಳೆಗೆ ಕೊಚ್ಚಿ ಹೋಗಿದೆ.

ಅರಸೀಕೆರೆ ಮಳೆ ಮಾಪನದಲ್ಲಿ 60 ಮಿ.ಮೀ., ನಾಗಲಮಡಿಕೆ 20 ಮಿ.ಮೀ., ಪಾವಗಡ 18 ಮಿ.ಮೀ., ತಿರುಮಣಿ 8 ಮಿ.ಮೀ ಮಳೆಯಾಗಿದೆ.

ADVERTISEMENT

ನಿಡಗಲ್ ಹೋಬಳಿಯ ಕೆಲವೆಡೆ ಮಳೆ ನೀರು ಮನೆಗೆ ನುಗ್ಗಿದ್ದರಿಂದ ಸಮಸ್ಯೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.