ಹುಳಿಯಾರು: ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಉತ್ತಮ ಮಳೆಯಾಗಿದ್ದು ಅಲ್ಲಲ್ಲಿ ಕೆರೆ- ಕಟ್ಟೆಗಳಿಗೆ ನೀರು ಬಂದಿದೆ. ಕೆಲವೆಡೆ ಬೆಳೆ ನಷ್ಟವಾಗಿದೆ.
ಹುಳಿಯಾರು ಸೇರಿದಂತೆ ಹೋಬಳಿ ವ್ಯಾಪ್ತಿಯ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಮಳೆಯಾಗಿದೆ. ದಸೂಡಿ ಭಾಗದ ಸುತ್ತಮುತ್ತ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಕೆರೆ ಕಟ್ಟೆಗಳಿಗೆ ನೀರು ಬಂದಿದೆ. ದಸೂಡಿ- ರಂಗನಕೆರೆ ನಡುವಿನ ಕಟ್ಟೆ ಒಂದೇ ರಾತ್ರಿಗೆ ಕೋಡಿ ಹರಿದಿದೆ.
ಬುಕ್ಕಾಪಟ್ಟಣ ಅರಣ್ಯ ಪ್ರದೇಶಕ್ಕೆ ಸೇರಿದ ಸಂತೆಕಣಿವೆ ಕೆರೆ, ರಾಮಪ್ಪನ ಕೆರೆಗಳಿಗೆ ನೀರು ಬಂದಿದೆ. ನುಲೇನೂರು ಹಾಗೂ ರಂಗನಕೆರೆ ಭಾಗದಲ್ಲಿ ಉತ್ತಮ ಮಳೆಯಾಗಿ ರೈತರ ಹೊಲಗಳಲ್ಲಿ ನಿರ್ಮಿಸಿರುವ ಏರಿ- ಬದುಗಳು ಕೊಚ್ಚಿಹೋಗಿವೆ. ಸೋಮನಹಳ್ಳಿ ಗ್ರಾಮದಲ್ಲಿ ಜೋರು ಮಳೆಗೆ ಚರಂಡಿ ಕಟ್ಟಿ, ಹಲವು ಮನೆಗಳಿಗೆ ನೀರು ನುಗ್ಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.