
ಪ್ರಜಾವಾಣಿ ವಾರ್ತೆ
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ರಾಷ್ಟ್ರೀಯ ಹೆದ್ದಾರಿಯ ಶಿವಸಂದ್ರ ಅರಣ್ಯ ಪ್ರದೇಶ ಸಮೀಪ ಸರಣಿ ಅಪಘಾತವಾಗಿರುವುದು
ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿ ಶಿವಸಂದ್ರ ಅರಣ್ಯ ಭಾಗದ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಕಾರು, ಲಾರಿ ಹಾಗೂ ಸರಕು ಸಾಗಾಣಿಕೆ ವಾಹನ ನಡುವೆ ಬುಧವಾರ ಬೆಳಿಗ್ಗೆ ಸರಣಿ ಅಪಘಾತವಾಗಿದೆ.
ವಾಹನಗಳು ಒಂದಕ್ಕೊಂದು ಡಿಕ್ಕಿಯಾಗಿದೆ. ಯಾವುದೇ ಪ್ರಾಣಪಾಯವಾಗಿಲ್ಲ. ಹೆದ್ದಾರಿ ಕಾಮಗಾರಿ ಸಂಪೂರ್ಣವಾಗಿ ಮುಗಿದಿಲ್ಲ. ಈಗಾಗಲೇ ಕೆಲವೆಡೆ ಕಾಮಗಾರಿ ಮುಗಿದಿರುವಲ್ಲಿ ರಸ್ತೆ ಬಿರುಕು, ಕೆಲವೆಡೆ ಸಣ್ಣಪುಟ್ಟ ಗುಂಡಿಗಳು ಬಿದ್ದಿವೆ.
ರಸ್ತೆ ರಿಪೇರಿ ಮಾಡುವ ಜಾಗಗಳಲ್ಲಿ ಅಗತ್ಯ ಕ್ರಮಕೈಗೊಂಡು ವಾಹನ ಸವಾರರಿಗೆ ತೊಂದರೆ ಆಗದಂತೆ ಸಂಬಂಧಿಸಿದವರು ನೋಡಿಕೊಳ್ಳಬೇಕು ಎಂದು ಸಾರ್ವಜನಿಕರು ಹಾಗೂ ವಾಹನ ಸವಾರರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.