ADVERTISEMENT

ತುಮಕೂರು: ಹಿಂದೂ ಸಮಾಜೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 5:20 IST
Last Updated 10 ಫೆಬ್ರುವರಿ 2026, 5:20 IST
ತುಮಕೂರಿನ ಜಯನಗರದಲ್ಲಿ ಹಿಂದೂ ಸಮಾಜೋತ್ಸವದ ಅಂಗವಾಗಿ ಶೋಭಾಯಾತ್ರೆ ನಡೆಯಿತು
ತುಮಕೂರಿನ ಜಯನಗರದಲ್ಲಿ ಹಿಂದೂ ಸಮಾಜೋತ್ಸವದ ಅಂಗವಾಗಿ ಶೋಭಾಯಾತ್ರೆ ನಡೆಯಿತು   

ತುಮಕೂರು: ಜಾತಿ, ಪಂಥ, ಭೇದ ಮರೆತು ಹಿಂದೂಗಳೆಲ್ಲರೂ ಒಂದೇ ಕುಟುಂಬ ಎಂಬ ಭಾವನೆಯೊಂದಿಗೆ ಧರ್ಮ ರಕ್ಷಣೆಗೆ ಪಣ ತೊಟ್ಟು ನಿಲ್ಲಬೇಕಾಗಿದೆ ಎಂದು ಶಿವಗಂಗೆ ಹೊನ್ನಮ್ಮಗವಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಲಹೆ ಮಾಡಿದರು.

ನಗರದ ಜಯನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಹಿಂದೂ ಸಮಾಜೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಆದರ್ಶದಿಂದ ಉತ್ತಮವಾಗಿ ಬದುಕುವುದೇ ಹಿಂದೂ ಧರ್ಮದ ಸಾರ್ಥಕತೆ. ಪ್ರಸ್ತುತ ಸಂದರ್ಭದಲ್ಲಿ ಹಿಂದೂ ಸಮಾಜ ಒಗ್ಗಟ್ಟಾಗಿ ನಿಲ್ಲುವ ಅಗತ್ಯವಿದೆ. ಧರ್ಮ ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಹಿಂದೂ ಎಂಬುದು ಕೇವಲ ಒಂದು
ಧರ್ಮವಲ್ಲ, ಅದು ನಮ್ಮ ಜೀವನಕ್ರಮ, ದೈನಂದಿನ ಸಂಸ್ಕೃತಿ, ಸಂಪ್ರದಾಯ ಎಂದು ಹೇಳಿದರು.

ADVERTISEMENT

ವಿದ್ಯಾಭಾರತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್‍ ಕುಮಾರ್, ‘ನಮ್ಮ ಸಂಘಟನಾ ಸಾಮರ್ಥ್ಯ ಕಂಡುಕೊಳ್ಳುವ ಸಲುವಾಗಿ ಹಿಂದೂ ಸಮಾಜೋತ್ಸವ ಆಚರಿಸಲಾಗುತ್ತಿದೆ’ ಎಂದರು.

ಶೋಭಾಯಾತ್ರೆಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಚಾಲನೆ ನೀಡಿದರು. ಸಮಿತಿ ಅಧ್ಯಕ್ಷ ಎಸ್.ಪುಟ್ಟೀರಪ್ಪ, ಪ್ರಮುಖರಾದ ಹನುಮಂತಪ್ಪ, ಸಿ.ಎನ್.ರಮೇಶ್, ಎಂ.ವಿ.ರುದ್ರೇಶ್, ಜಗಜ್ಯೋತಿ ಸಿದ್ಧರಾಮಯ್ಯ, ವೀರಪ್ಪ ದೇವರು, ರಾಕೇಶ್, ಶೆಟ್ಟಳ್ಳಯ್ಯ, ಸಿದ್ಧಗಂಗಪ್ಪ, ಎಸ್‍ಟಿಡಿ ನಾಗರಾಜು, ಬಲರಾಮ್, ಎಚ್.ಎಂ.ರವೀಶಯ್ಯ, ನಾರಾಯಣ ನಾಯಕ್, ಕೆ.ವಿ.ಪ್ರಕಾಶ್, ಚೇತನ್ ಪುಟ್ಟೀರಪ್ಪ, ಮಲ್ಲಪ್ಪ, ಹನುಮಂತರಾಜು, ಗೋವಿಂದರಾಜು, ವಸಂತ ಸುದರ್ಶನ್, ಸಿದ್ಧರಾಜು, ತರಕಾರಿ ಮಹೇಶ್, ಅಕ್ಷಯ್ ಚೌಧರಿ, ವರದಯ್ಯ, ಲಿಂಗದೇವರು, ಜಗದೀಶ್, ಕೆ.ವಿ.ಕುಮಾರ್, ಮನೋಜ್, ಶಿವಲಿಂಗಶೆಟ್ಟಿ, ರಾಜಶೇಖರ್, ನಾಗರಾಜಮೂರ್ತಿ ಪಾಲ್ಗೊಂಡರು.

ಶಿರಾಗೇಟ್: ನಗರದ ಶಿರಾಗೇಟ್‍ ಹಿಂದೂ ಸಮಾಜೋತ್ಸವ ಸಮಿತಿಯಿಂದ ಭಾನುವಾರ ಹಿಂದೂ ಸಮಾಜೋತ್ಸವ ನೆರವೇರಿತು. ಕನಕ ವೃತ್ತದಿಂದ ಆರಂಭವಾದ ಶೋಭಾಯಾತ್ರೆಯನ್ನು ರೇವಣಸಿದ್ಧೇಶ್ವರ ಮಠದ ಬಿಂದುಶೇಖರ ಒಡೆಯರ್ ಸ್ವಾಮೀಜಿ ಉದ್ಘಾಟಿಸಿದರು.

ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಪ್ರಮುಖರಾದ ಎಂ.ಬಾಲಚಂದ್ರ, ರಾಧಾ ಗೋಪಾಲ್, ಲಕ್ಷ್ಮಿನರಸಿಂಹರಾಜು, ಸ್ವದೇಶಿ ವಿಶ್ವನಾಥ್, ಪುಟ್ಟರಾಜು, ಎಸ್.ನಿರಂಜನ್, ಎನ್.ರವಿಶಂಕರ್, ಟಿ.ಜಿ.ಪ್ರಸನ್ನಕುಮಾರ್, ಮುಖಂಡರಾದ ಭೀಮರಾಜು, ಟಿ.ಡಿ.ಯೋಗೀಶ್, ಶಶಿಕುಮಾರ್, ಜಿ.ಮನು, ಪ್ರಸನ್ನ, ಶೇಷಾಚಲ, ದೀಪಕ್, ಪದ್ಮರಾಜು, ಮಹೇಶ್, ದೇವರಾಜು, ಭಾನುಪ್ರಕಾಶ್, ಶಂಕರಪ್ಪ, ಪುನೀತ್, ಗೋಕುಲ್ ಮಂಜುನಾಥ್, ಟಿ.ಆರ್.ರಾಜೇಶ್, ಅನಿಲ್‍ಕುಮಾರ್, ರತ್ನಾಕರ್ ನಾಯಕ್, ಎಂ.ಜಿ.ಕುಲಕರ್ಣಿ, ಗೋವಿಂದರಾಜು ಭಾಗವಹಿಸಿದ್ದರು.

ತುಮಕೂರಿನ ಶಿರಾಗೇಟ್‌ನಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ಭಾಗವಹಿಸಿದ್ದ ಪ್ರಮುಖರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.