ADVERTISEMENT

ಪಾವಗಡ: ಬೀಗ ಒಡೆದು ನಗದು, ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 6:42 IST
Last Updated 12 ನವೆಂಬರ್ 2025, 6:42 IST
   

ಪಾವಗಡ: ಪಟ್ಟಣದ ಕಾಳಿದಾಸ ನಗರದಲ್ಲಿ ಸೋಮವಾರ ರಾತ್ರಿ ಮನೆ ಬೀಗ ಒಡೆದು, ನಗದು ಮತ್ತು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ಓಬಳಮ್ಮ ಅವರ ಮನೆ ಬೀಗ ಒಡೆದ ಕಳ್ಳರು ₹2 ಲಕ್ಷ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಮನೆಗೆ ಬೀಗ ಹಾಕಿ ಮಹಡಿ ಮೇಲೆ ಮಲಗಿದ್ದರು. ಮನೆಯ ಕಾರ್ಯಕ್ರಮಕ್ಕಾಗಿ ನಗದನ್ನು ಮನೆಯಲ್ಲಿರಿಸಲಾಗಿತ್ತು. ಮನೆಯ ಗೇಟ್‌ ಹಾರಿ, ಬೀಗ ಒಡೆದು ಕೃತ್ಯ ಎಸಗಲಾಗಿದೆ. ಬೆಳಿಗ್ಗೆ ನಗದು, ಚಿನ್ನದ ಆಭರಣ ಕಳುವಾಗಿರುವುದು ತಿಳಿಯಿತು ಎಂದು ಓಬಳಮ್ಮ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.