ADVERTISEMENT

ಗೆದ್ದವರಲ್ಲಿ ನಮ್ಮವರೆಷ್ಟು? ಲೆಕ್ಕಾಚಾರ ಜೋರು

ರಾಜಕೀಯ ಪಕ್ಷಗಳಿಗೆ ಸಂಘಟನೆ, ಮುಂದಿನ ಚುನಾವಣೆಗಳಿಗೆ ಅಡಿಪಾಯ

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 2:29 IST
Last Updated 1 ಜನವರಿ 2021, 2:29 IST

ಕುಣಿಗಲ್: ತಾಲ್ಲೂಕಿನ 36 ಗ್ರಾಮಪಂಚಾಯಿತಿಯ 496 ಸದಸ್ಯರುಗಳು ಆಯ್ಕೆಯಾಗಿದ್ದು, ಮೂರು ಪ್ರಮುಖ ಪಕ್ಷದ ಮುಖಂಡರು ನಮ್ಮವರು ಎಷ್ಟು ಎಂದು ಅಂಕಿ ಅಂಶಗಳನ್ನು ಕಲೆ ಹಾಕುವುದರಲ್ಲಿ ನಿರತರಾಗಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷಾಧಾರಿತ ಚುನಾವಣೆಯಲ್ಲದಿದ್ದರೂ, ರಾಜಕೀಯ ಪಕ್ಷಗಳಿಗೆ ಸಂಘಟನೆ ಮತ್ತು ಮುಂದಿನ ಚುನಾವಣೆಗಳಿಗೆ ಅಡಿಪಾಯವಾಗಿದೆ. ಗೆದ್ದವರು ನಮ್ಮವರ? ಅಥವಾ ಹೊಂದಾಣಿಕೆಯಿಂದ ಗೆದ್ದವರಾ ಎಂದು ಪಟ್ಟಿ ಮಾಡಿ ಸಂಖ್ಯಾಬಲ ಪ್ರದರ್ಶನಕ್ಕೆ ಸಿದ್ಧರಾಗುತ್ತಿದ್ದಾರೆ.

ಕಾಂಗ್ರೆಸ್ ಪರವಾಗಿ ಮಾತನಾಡಿದ ಶಾಸಕ ಡಾ. ರಂಗನಾಥ್, 252 ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಪಡೆದಿದ್ದಾರೆ. 20 ಪಂಚಾಯಿತಿಯಲ್ಲಿ ಅಧಿಕಾರ ಹಿಡಿಯುವುದು ಖಚಿತ. ಅತಂತ್ರವಾಗಿರುವ 8 ಪಂಚಾಯಿತಿಗಳಲ್ಲಿ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿಯಲು ಪ್ರಯತ್ನಿಸಲಾಗುವುದು ಎಂದರು.

ADVERTISEMENT

ಬಿಜೆಪಿ ಪರವಾಗಿ ಮಾತನಾಡಿದ ಪೀಕಾರ್ಡ್ ಬ್ಯಾಂಕ್ ನಿರ್ದೇಶಕ ಡಿ.ಕೃಷ್ಣಕುಮಾರ್, ‘17 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 174 ಬಿಜೆಪಿ ಬೆಂಬಲಿತ ಸದಸ್ಯರು ಗೆದ್ದಿದ್ದಾರೆ. 16 ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯುದು ಖಚಿತ. ಹುಲಿಯೂರುದುರ್ಗ, ಕೊಡವತ್ತಿ, ಮಡಕೆಹಳ್ಳಿ, ಭಕ್ತರಹಳ್ಳಿ, ಉಜ್ಜನಿ, ಯಡವಾಣಿ, ಕೆ.ಎಚ್.ಹಳ್ಳಿ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮೊದಲಬಾರಿಗೆ ಅತಿಹೆಚ್ಚಿನ ಮತಗಳಿಸುವುದರ ಮೂಲಕ ಪಕ್ಷಕ್ಕೆ ಹೆಚ್ಚಿನ ಬಲ ಬಂದಿದೆ’ ಎಂದು ತಿಳಿಸಿದ್ದಾರೆ.

ಜೆಡಿಎಸ್ ಪರವಾಗಿ ಜಗದೀಶ್ ಪ್ರತಿಕ್ರಿಯಿಸಿ ಜೆಡಿಎಸ್‌ ಬೆಂಬಲಿತ 195 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. 12 ಪಂಚಾಯಿತಿಯಲ್ಲಿ ಅಧಿಕಾರ ಹಿಡಿಯುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.