ಹುಳಿಯಾರು: ಸಮೀಪದ ಹಂದನಕೆರೆ ಗ್ರಾಮದಿಂದ ಸಬ್ಬೇನಹಳ್ಳಿ ಮಾರ್ಗವಾಗಿ ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಬೇಲಿ ಬೆಳೆದು ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ ಎಂದು ಸ್ಥಳೀಯರು ದೂರಿದ್ದಾರೆ.
ಮುಖ್ಯ ರಸ್ತೆಯಾಗಿದ್ದು ಪ್ರತಿನಿತ್ಯ ವಾಹನ ಸಂಚರಿಸುತ್ತವೆ. ಸಬ್ಬೇನಹಳ್ಳಿ ಮುಂದಕ್ಕೆ ಯಾತ್ರಾಸ್ಥಳವಾಗಿರುವ ಗಿರಿಸಿದ್ದೇಶ್ವರ ಮಠಕ್ಕೆ ತಲುಪುತ್ತದೆ. ಮಠಕ್ಕೆ ಬೇರೆ ಬೇರೆ ಕಡೆಯಿಂದ ಯಾತ್ರಾರ್ಥಿಗಳು ಬರುತ್ತಾರೆ. ಆದರೆ ರಸ್ತೆಯ ಅಕ್ಕಪಕ್ಕ ಜಾಲಿ ಸೇರಿದಂತೆ ಇತರ ವಿವಿಧ ಜಾತಿಯ ಗಿಡಗಳು ಬೆಳೆದು ರಸ್ತೆಗೆ ಚಾಚಿಕೊಂಡಿದೆ. ರಸ್ತೆ ತಿರುವಿನಿಂದ ಕೂಡಿದ್ದು ವಾಹನಗಳಲ್ಲಿ ಸಂಚರಿಸುವಾಗ ಎದುರುಗಡೆ ಬರುವ ವಾಹನಗಳು ಕಾಣಿಸದೆ ಅಪಘಾತ ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.
ಸಂಬಂಧಪಟ್ಟ ಇಲಾಖೆಯವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸಬ್ಬೇನಹಳ್ಳಿ ಗ್ರಾಮದ ವಸಂತ್ ಆರೋಪಿಸಿದರು. ಅಧಿಕಾರಿಗಳು ಇತ್ತ ಗಮನಹರಿಸಿ ಬೇಲಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.