ADVERTISEMENT

ಹುಳಿಯಾರು ಪ.ಪಂ ಕಚೇರಿ ಮುಂದೆ ಏಕವ್ಯಕ್ತಿ ಸರದಿ ಉಪವಾಸ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 6:53 IST
Last Updated 18 ಡಿಸೆಂಬರ್ 2025, 6:53 IST
ಹುಳಿಯಾರು ಪಟ್ಟಣ ಪಂಚಾಯಿತಿ ಮುಂದೆ ರೈತಸಂಘ ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಬುಧವಾರ ಹೊನ್ನಮ್ಮ ಉಪವಾಸ ಕೈಗೊಂಡಿದ್ದರು
ಹುಳಿಯಾರು ಪಟ್ಟಣ ಪಂಚಾಯಿತಿ ಮುಂದೆ ರೈತಸಂಘ ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಬುಧವಾರ ಹೊನ್ನಮ್ಮ ಉಪವಾಸ ಕೈಗೊಂಡಿದ್ದರು   

ಹುಳಿಯಾರು: ಪಟ್ಟಣದ ಕಸ ವಿಲೇವಾರಿ ಘಟಕ ಸ್ಥಾಪನೆ ಸೇರಿದಂತೆ ಮೂಲ ಸೌಕರ್ಯಗಳನ್ನು ಸ್ಥಳೀಯ ಆಡಳಿತ ಒದಗಿಸದಿರುವುದನ್ನು ವಿರೋಧಿಸಿ ರಾಜ್ಯ ರೈತಸಂಘ (ಹೊಸಹಳ್ಳಿ ಚಂದ್ರಣ್ಣ ಬಣ) ಪ.ಪಂ ಕಚೇರಿ ಮುಂದೆ ನಡೆಸುತ್ತಿರುವ ಸತ್ಯಾಗ್ರಹ ಬುಧವಾರ 72ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿದಿನ ಏಕವ್ಯಕ್ತಿ ಉಪವಾಸ ಬುಧವಾರ 5ನೇ ದಿನಕ್ಕೆ ಕಾಲಿಟ್ಟಿದೆ.

ಕಳೆದ ಶನಿವಾರದಿಂದ ಏಕವ್ಯಕ್ತಿ ಉಪವಾಸ ಸತ್ಯಾಗ್ರಹ ಆರಂಭಗೊಂಡಿದೆ. ಮೊದಲ ದಿನ ರೈತಸಂಘದ ಅಧ್ಯಕ್ಷ ಚಂದ್ರಣ್ಣ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಸೀಗೆಬಾಗಿ ಗ್ರಾಮದ ಆಟೊಚಾಲಕ ಮಂಜುನಾಥ್‌, ಹುಳಿಯಾರು ಪಟ್ಟಣದ ಶಂಕರಪುರ ನಿವಾಸಿ ರತ್ನಮ್ಮ ಮತ್ತಿತರರು ಸರದಿಯಾಗಿ ಉಪವಾಸ ಕೈಗೊಂಡಿದ್ದರು.

ಬುಧವಾರ ಹೊನ್ನಮ್ಮ ಸರದಿಯಂತೆ ಉಪವಾಸ ನಡೆಸಿದರು. ಪ್ರತಿದಿನ ಒಬ್ಬೊಬ್ಬರು ಉಪವಾಸ ಸತ್ಯಾಗ್ರಹ ನಡೆಸಲಿದ್ದು ಹೀಗೆ ಮುಂದೆ 365 ದಿನವಾದರೂ ನಮ್ಮ ಉಪವಾಸ ಸತ್ಯಾಗ್ರಹ ನಡೆಯಲಿದೆ ಎಂದು ಚಂದ್ರಣ್ಣ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.