ADVERTISEMENT

ಸ್ವಾಮೀಜಿಗೆ ಅಪಮಾನ: ಖಂಡನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 3:57 IST
Last Updated 12 ಜುಲೈ 2025, 3:57 IST
ಟಿ.ಆರ್.ಸದಾಶಿವಯ್ಯ
ಟಿ.ಆರ್.ಸದಾಶಿವಯ್ಯ   

ತುಮಕೂರು: ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದ ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಬಗ್ಗೆ ಕಾಂಗ್ರೆಸ್‌ ವಕ್ತಾರ ಅನಂತಕುಮಾರ್ ನಾಯ್ಕ್ ಅಸಭ್ಯವಾಗಿ ಮಾತನಾಡಿರುವುದನ್ನು ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಆರ್.ಸದಾಶಿವಯ್ಯ ಖಂಡಿಸಿದ್ದಾರೆ.

ವೀರಶೈವ ಲಿಂಗಾಯತ ಮಠಗಳ ಸಮಾಜ ಸೇವಾ ಕಾರ್ಯಗಳ ಬಗ್ಗೆ ಅವಿವೇಕದಿಂದ ಮಾತನಾಡಿರುವುದನ್ನು ಪೀಠದ ಲಕ್ಷಾಂತರ ಭಕ್ತರು ಸಹಿಸಿಕೊಳ್ಳುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಂಭಾಪುರಿ ಸ್ವಾಮೀಜಿ ಹೊಲದಲ್ಲಿ ಕೃಷಿ ಮಾಡಿದ್ದಾರೆಯೇ? ಕಳೆ ತೆಗೆದಿದ್ದಾರೆಯೇ? ಎಂದು ಬಾಲಿಶವಾಗಿ ಪ್ರಶ್ನಿಸಿದ್ದಾರೆ. ವೀರಶೈವ ಲಿಂಗಯತ ಮಠಗಳು ಕೃಷಿ ಪ್ರಧಾನ ಕಾರ್ಯಕ್ಕೆ ಒತ್ತು ನೀಡುತ್ತಾ ಬೆಳೆದು ಬಂದಿವೆ. ರೈತರ ಹಿತ ಕಾಪಾಡಿಕೊಂಡು ಬಂದಿವೆ ಎಂಬುದನ್ನು ತಿಳಿದುಕೊಳ್ಳಲಿ ಎಂದು ಸಲಹೆ ಮಾಡಿದ್ದಾರೆ.

ADVERTISEMENT

ರಾಜಕಾರಣದಲ್ಲಿ ಈಗಷ್ಟೇ ಕಣ್ಣು ಬಿಡುತ್ತಿರುವ ಅನಂತಕುಮಾರ್ ನಾಯ್ಕ್ ಅವರಿಗೆ ನಾಡಿನ ವೀರಶೈವ ಲಿಂಗಾಯತ ಮಠಗಳ ಪರಂಪರೆ, ಸೇವೆಗಳ ಅರಿವಿಲ್ಲ. ಮಠಗಳು ಜಾತಿಯತೆ ಮಾಡುತ್ತಿವೆ ಎಂದು ಹೇಳಿದ್ದಾರೆ. ಆದರೆ ಎಲ್ಲ ಮಠಗಳು ಎಲ್ಲ ಜಾತಿ, ಧರ್ಮದ ಮಕ್ಕಳಿಗೆ ಆಶ್ರಯ ನೀಡಿ, ಅನ್ನ, ಜ್ಞಾನ ನೀಡಿವೆ. ಮಠದಲ್ಲಿ ಕಲಿತು ಬೆಳೆದ ಲಕ್ಷಾಂತರ ಮಂದಿ ಉನ್ನತ ಸ್ಥಾನಗಳಲ್ಲಿ ಬದುಕು ರೂಪಿಸಿಕೊಂಡಿದ್ದಾರೆ ಎಂದು ನೆನಪು ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.