
ಪ್ರಜಾವಾಣಿ ವಾರ್ತೆ
ಬಂಧನ
ತುರುವೇಕೆರೆ: ರಾತ್ರಿ ಸಮಯದಲ್ಲಿ ಮನೆ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ ಅಂತರರಾಜ್ಯ ಕಳ್ಳರನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.
ಆಂಧ್ಯಪ್ರದೇಶದ ವದ್ದೂರು ಗ್ರಾಮದ ಪೆದ್ದಿನೇನಿ ವಂಶಿ, ಆಂಧ್ರದ ಸಂಕ್ರಾತಿಪಲ್ಲಿ ಗ್ರಾಮದ ಎಲ್.ಲಕ್ಷ್ಮೀಪತಿ ಬಂಧಿತರು.
ಆರೋಪಿಗಳು ತಾಲ್ಲೂಕಿನ ಮಾಯಸಂದ್ರ ಗ್ರಾಮದ ಎಮ್. ಟಿ ರಾಜಣ್ಣ ಅವರ ಮನೆಯ ಬಾಗಿಲು ಮುರಿದು ಬೆಳ್ಳಿ ಮತ್ತು ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವ ಬಗ್ಗೆ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.