ADVERTISEMENT

ಜಯಚಂದ್ರ ಗೆಲುವು: ಬಲಗಡೆ ಹೂ ನೀಡಿದ ಹೊನ್ನಾದೇವಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 7:47 IST
Last Updated 9 ನವೆಂಬರ್ 2020, 7:47 IST
ಬಲಗಡೆ ಹೂ ನೀಡಿದ ಹೊನ್ನಾದೇವಿ
ಬಲಗಡೆ ಹೂ ನೀಡಿದ ಹೊನ್ನಾದೇವಿ   

ತುಮಕೂರು: ಶಿರಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಗೆಲ್ಲುವುದಾದರೆ ಬಲಗಡೆ ಹೂ ಕೊಡು ತಾಯಿ-ಹೀಗೆ ಕೋರಿಕೆ ಸಲ್ಲಿಸಿದ ಕಾಂಗ್ರೆಸ್ ಕಾರ್ಯಕರ್ತರಿಗೆ ಹೊನ್ನಾದೇವಿ ಬಲಗಡೆಯೇ ಹೊ ನೀಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ನಗರದ ಹೊನ್ನಾದೇವಿ ದೇವಸ್ಥಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಈ ಕೋರಿಕೆ ಸಲ್ಲಿಸಿದ್ದರು.

ಮಂಗಳವಾರ (ನ.10) ಮತ ಎಣಿಕೆ ನಡೆಯಲಿದೆ‌. ಈ ವಿಡಿಯೊವನ್ನು ಕಾಂಗ್ರೆಸ್ ಕಾರ್ಯಕರ್ತರು ಜಾಲತಾಣಗಳಲ್ಲಿ ಹೆಚ್ಚು ಹಂಚಿಕೊಳ್ಳುತ್ತಿದ್ದಾರೆ.

ADVERTISEMENT

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅವರ ಗೆಲುವಿಗೂ ಸುಮಲತಾ ಅವರ ಬೆಂಬಲಿಗರು ಕೋರಿಕೆ ಸಲ್ಲಿಸಿದ್ದರು. ಆಗಲೂ ದೇವಿಯ ಮೂರ್ತಿಯ ಬಲಗಡೆಯಿಂದ ಹೂ ಕೆಳಕ್ಕೆ ಬಿದ್ದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.