ADVERTISEMENT

ಉದ್ಯೋಗ ಸೃಷ್ಡಿಗೆ ಆದ್ಯತೆ: ಡಾ.ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2019, 7:47 IST
Last Updated 16 ಫೆಬ್ರುವರಿ 2019, 7:47 IST
   

ತುಮಕೂರು: ರಾಜ್ಯ ಸರ್ಕಾರವು ತೋರಿಕೆಗೆ ಉದ್ಯೋಗ ಮೇಳ ನಡೆಸುತ್ತಿಲ್ಲ. ಖಾಸಗಿ ಕಂಪನಿಗಳ ಸಹಕಾರದೊಂದಿಗರ ಉದ್ಯೋಗ ಸೃಷ್ಡಿಗೆ ಆದ್ಯತೆ ನೀಡಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಹೇಳಿದರು.

ತುಮಕೂರು- ಚಿತ್ರದುರ್ಗ ಜಿಲ್ಲೆ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ ಚಾಲನೆ ನೀಡಲಾಗಿದೆ. ಈಚೆಗಷ್ಟೇ ಲೋಕೋಪಯೋಗಿ ಇಲಾಖೆಯಲ್ಲಿನ 780 ಎಂಜಿನಿಯರ್ ಹುದ್ದೆ ನೇಮಕಕ್ಕೆ ಒಪ್ಪಿಗೆ ನೀಡಲಾಗಿದೆ ಎಂದರು.

ADVERTISEMENT

ಖಾಸಗಿ ಕಂಪನಿಗಳು ಉದ್ಯೋಗ ಸೃಷ್ಟಿಸಲು ಸರ್ಕಾರದಿಂದ ಅನುಕೂಲತೆ ಮಾಡಿಕೊಡುತ್ತಿದೆ. ಕೈಗಾರಿಕೆಗಳಿಗೆ ಉತ್ತೇಜನ ನೀಡಲಾಗಿದೆ ಎಂದರು.

ತುಮಕೂರು- ಚಿತ್ರದುರ್ಗ ಜಿಲ್ಲೆ ಬೃಹತ್ ಉದ್ಯೋಗ ಮೇಳವನ್ನು ಡಿಸಿಎಂ ಜಿ. ಪರಮೇಶ್ವರ ಉದ್ಘಾಟಿಸಿದರು.

ಮೇಳದಲ್ಲಿ ನೋಂದಣಿ ಮಾಡಿಸಿಕೊಂಡ 21 ಸಾವಿರ ಯುವಕರಿಗೆ ಉದ್ಯೋಗ ಸಿಗಲಿಕ್ಕಿಲ್ಲ. ಆದರೆ ಅವಕಾಶಗಳ ಹೆಬ್ಬಾಗಿಲು ಇದೆ ಎಂಬುದು ಮನವರಿಕೆಯಾಗುತ್ತದೆ ಎಂದರು.

ಮೇಳದಲ್ಲಿ ಭಾಗವಹಿಸಿದ 106 ಕಂಪನಿಗಳು ಹೆಚ್ಚು ಯುವಕರಿಗೆ ಉದ್ಯೋಗವನ್ನು ಅರ್ಹತೆಗನುಸಾರ ಕೊಡಬೇಕು ಎಂದು ಮನವಿ ಮಾಡಿದರು.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತಾ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್ ಮಾತನಾಡಿ, ' ಉದ್ಯೋಗದಾತ ಕಂಪನಿಗಳು ನಿರುದ್ಯೋಗಿಗಳ ನಿರೀಕ್ಷೆ ಹುಸಿ ಮಾಡಬಾರದು ಎಂದು ಮನವಿ ಮಾಡಿದರು.

ಕಾರ್ಮಿಕ ಸಚಿವ ವೆಂಕಟರಮಣಪ್ಪ ಮಾತನಾಡಿ, ' ಉದ್ಯೋಗ ಮೇಳದಲ್ಲಿನ ಉದ್ಯೋಗ ಅವಕಾಶಗಳನ್ನು ಯುವಕರು ಬಳಸಿಕೊಳ್ಳಬೇಕು. ತುಮಕೂರಿನಲ್ಲಿ ಕಾರ್ಮಿಕ ಭವನ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಚಿತ್ರದುರ್ಗ ಸಂಸದ ಬಿ.ಎನ್. ಚಂದ್ರಪ್ಪ ಮಾತನಾಡಿ, ' ಚಿತ್ರದುರ್ಗ ಜಿಲ್ಲೆಯ ಯುವಕರಿಗೆ ಹೆಚ್ಚಿನ ಉದ್ಯೋಗವಕಾಶಗಳು ಲಭಿಸಲಿ ಎಂದು ಆಶಯ ವ್ಯಕ್ತಪಡಿಸಿದರು.

ಸಂಸದ ಎಸ್.ಪಿ.ಮುದ್ದಹನುಮೇಗೌಡ, ಶಾಸಕ ಜಿ.ಬಿ.ಜ್ಯೋತಿ ಗಣೇಶ, ಸಿದ್ಧಗಂಗಾಮಠದ ಡಾ.ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.