
ತುಮಕೂರು: ರಂಗಭೂಮಿ ಜನರಲ್ಲಿ ಅರಿವು ಮೂಡಿಸಿ, ಕ್ರಿಯಾಶೀಲರನ್ನಾಗಿಸುತ್ತದೆ. ಹೀಗಾಗಿ ರಂಗ ಚಟುವಟಿಕೆಗೆ ಎಲ್ಲರೂ ಬೆಂಬಲ ನೀಡಬೇಕು ಎಂದು ಲೇಖಕಿ ಬಾ.ಹ. ರಮಾಕುಮಾರಿ ಹೇಳಿದರು.
ನಗರದಲ್ಲಿ ಈಚೆಗೆ ಅಭಿನವ ರಂಗ ಸಂಪನ್ಮೂಲಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ರಂಗಭೂಮಿಯ ಇಂದಿನ ಸ್ಥಿತಿ-ಗತಿ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ರಂಗ ಕಲಾವಿದರಿಗೆ ಸಹಕಾರ ತುಂಬಾ ಮುಖ್ಯ. ಕಲಾವಿದರನ್ನು ಗೌರವಿಸಿ, ಬೆಳೆಸಿ, ಅವರನ್ನು ಮುಖ್ಯಭೂಮಿಕೆಯಲ್ಲಿ ತರುವುದಕ್ಕೆ ಜನಸಾಮಾನ್ಯರು, ಸಹೃದಯರುಮುಂದಾಗಬೇಕು. ನಾಟಕ ಎನ್ನುವುದು ಪ್ರಸ್ತುತ ಸಮಸ್ಯೆ ಪರಿಚಯಿಸುವ ಒಂದು ಕನ್ನಡಿಯಂತೆಎಂದರು.
ಲೇಖಕಿ ಶೈಲಾ ನಾಗರಾಜ್, ‘ಪ್ರಯೋಗಾತ್ಮಕ ನಾಟಕಗಳಿಂದ ವಿಭಿನ್ನವಾದ ಹೊಸ ದಾರಿಸೃಷ್ಟಿಸಲು ಸಾಧ್ಯವಾಗುತ್ತದೆ. ಹಲವಾರು ತೊಡಕುಗಳನ್ನು ದಾಟಿ ನಿರ್ದೇಶಕರು ನಾಟಕ ಕಟ್ಟಬೇಕಾದ ಪರಿಸ್ಥಿತಿ ಬಂದಿದೆ. ರಂಗಭೂಮಿಯು ಎಲ್ಲರಿಗೂ ಜೀವನ ಕಟ್ಟಿಕೊಟ್ಟಿದೆ. ಕಲೆಗೆ ಯಾವತ್ತೂ ಸೋಲಿಲ್ಲ. ರಂಗಭೂಮಿ ನಿರಂತರ ಯಾನವಾಗಿದೆ’ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿ ರಾಣಿ ಚಂದ್ರಶೇಖರ್ ಮಾತನಾಡಿದರು. ಪ್ರಮುಖರಾದ ಎಂ.ಎಸ್. ರಂಜಿತಾ ಇದ್ದರು.‘ಪಾರಿವಾಳ’ ನಾಟಕ ಪ್ರದರ್ಶನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.